ವಿವಾಹ ಸಂಭ್ರಮದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್

ಚೈತ್ರಾ ವಾಸುದೇವನ್‌ ದಂಪತಿ
ಚೈತ್ರಾ ವಾಸುದೇವನ್‌ ದಂಪತಿ
ಸಿನಿಮಾ-ಟಿವಿ

ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಹಾಗೂ ನಿರೂಪಕಿಯಾದ ಚೈತ್ರಾ ವಾಸುದೇವನ್‌ ಉದ್ಯಮಿ ಜಗದೀಪ್‌ ಎಲ್.‌ ಎಂಬುವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚೈತ್ರಾ ವಾಸುದೇವನ್‌ ಅವರು ಬಿಗ್‌ ಬಾಸ್‌ ಕನ್ನಡ 7ನೇ ಸೀಸನ್‌ ನಲ್ಲಿ ಭಾಗವಹಿಸಿದ್ದರು, ಇತ್ತೀಚಿಗಷ್ಟೇ ಪ್ಯಾರಿಸ್‌ ನಲ್ಲಿ ಫ್ರೀ ವೆಡ್ಡಿಂಗ್‌ ಪೋಟೋ ಶೂಟ್‌ ಸಹ ಮಾಡಿಸಿಕೊಂಡಿದ್ದರು, ಚೈತ್ರಾ ಅವರು ಮೈಸೂರು ಮೂಲದ ಉದ್ಯಮಿಯಾದ ಜಗದೀಪ್‌ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ನಿರೂಪಕಿ ಚೈತ್ರಾಗೆ ಇದು ಎರಡನೇ ವಿವಾಹವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ವಾಸುದೇವನ್ ಮದುವೆ ಜರುಗಿದೆ.

ಈ ಹಿಂದೆ ಚೈತ್ರಾ ಅವರು 2017 ರಲ್ಲಿ ಅಪ್ಪ ಅಮ್ಮನ ಆಸೆಯಂತೆ ಸತ್ಯ ನಾಯ್ಡು ಎಂಬುವರ ಜೊತೆ ಮದುವೆಯಾಗಿದ್ದರು, ಆ ಬಳಿಕ ವಿಚ್ಚೇದನ ಪಡೆದುಕೊಂಡಿದ್ದರು, ಇದೀಗ ಮನೆಯವರನ್ನು ಒಪ್ಪಿಸಿ ಜಗದೀಪ್‌ ಅವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.

 

Author:

...
Editor

ManyaSoft Admin

Ads in Post
share
No Reviews