ಬೆಂಗಳೂರು : ಆನ್ಲೈನ್ ಗೇಮಿಂಗ್ ಹುಚ್ಚಾಟ | ಪೋಷಕರನ್ನೇ ಥಳಿಸಿದ ಮಗ

ಬೆಂಗಳೂರು : 

ಆನ್‌ಲೈನ್‌ ಬೆಟ್ಟಿಂಗ್‌ ಭೂತಕ್ಕೆ ದಿನದಿಂದ ದಿನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಕ್ಷಣಮಾತ್ರದಲ್ಲಿ ದುಡ್ಡು ಗಳಿಸಬಹುದು ಅನ್ನೋ ಗೋಜಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಹೊರತಾಗಿಲ್ಲ. ಕಾರಣ ಇತ್ತೀಚಿಗೆ ತಾನೇ ಬೆಂಗಳೂರಿನ ಸೋಲದೇವಲನಹಳ್ಳಿ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ವಿದ್ಯಾರ್ಥಿಯೊರ್ವ ಆನ್‌ಲೈನ್‌ ಗೇಮಿಂಗ್‌ ಚಟಕ್ಕಾಗಿ ತನ್ನ ಹೆತ್ತವರಿಗೆ ಹಣಕ್ಕಾಗಿ ಪೀಡಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಆರೋಪಿ ಹರ್ಷ ಇತ್ತೀಚೆಗಷ್ಟೇ ಡಿಪ್ಲೊಮಾ ಮುಗಿಸಿದ್ದನು. ಓದುವ ವೇಳೆಯಲ್ಲಿ ಸಹವಾಸ ದೋಷದಿಂದ ಆನ್‌ಲೈನ್‌ ಗೇಮಿಂಗ್‌ ಹುಚ್ಚಿಗೆ ಬಿದ್ದಿದ್ದ. ಹಣವನ್ನು ಗೆದ್ದು ಮೋಜಿ ಮಸ್ತಿ ಮಾಡೋ ಕನಸ್ಸು ಕಂಡಿದ್ದು, ಗೇಮಿಂಗ್‌ ಹುಚ್ಚಿನ ಗೀಳು ಇಂದು ಅವನನ್ನು ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಮಂಗಳವಾರ ಬೆಳಗಿನ ಜಾವ 2:30ರ ಸುಮಾರಿಗೆ ಆನ್‌ಲೈನ್‌ ಗೇಮ್‌ ಆಡಲು ಹಣ ನೀಡದ್ದಕ್ಕಾಗಿ ಆತನ ತಂದೆ ಕೃಷ್ಣಮೂರ್ತಿ, ತಾಯಿ ಪಾರ್ವತಮ್ಮ ಹಾಗೂ ಸಹೋದರಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆತನನ್ನು ತಡೆಯಲು ಸಾಧ್ಯವಾಗದ ಕಾರಣ ಪೋಷಕರು ಅವನ ಮುಖಕ್ಕೆ ಮೆಣಸಿನ ಪುಡಿಯನ್ನು ಎರಚಿದ್ದಾರೆ. ಈ ಮಧ್ಯೆ ಅವರ ಕಿರುಚಾಟ ಕೇಳಿ, ನೆರೆಹೊರೆಯವರು ಪೋಲೀಸರಿಗೆ ಮಾಹಿತಿಯನ್ನು ನೀಡಿ, ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಆರೋಪಿಯ ಸಹೋದರಿ ನಯನಾಗೆ ಗಂಭೀರ ಗಾಯಗಳಾಗಿದ್ದು , ಅಪ್ಪ ಅಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಹರ್ಷನ ನಡವಳಿಕೆ ಅಸಹಜವಾಗಿತ್ತು ಎಂದು ಸಂತ್ರಸ್ತರು ಪೋಲೀಸರಿಗೆ ತಿಳಿಸಿದ್ದಾರೆ. ಕಾಲೇಜು ಮುಗಿಸಿ ಮನೆಯಲ್ಲಿ ಇದ್ದ ಎಂದು ಪೋಷಕರು ಬೈದು ಬುದ್ದಿ ಹೇಳಿದ್ದರು. ಆದರೆ ಈ ಘಟನೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆತ ಮಾನಸಿಕವಾಗಿ ಸ್ಥಿರನಾಗಿದ್ದಾನೆಂದು ವಿಚಾರಣೆ ಬಳಿಕ ತಿಳಿದು ಬಂದಿದ್ದು, ಸೆಕ್ಷನ್‌ 307 ಕೊಲೆ ಪ್ರಯತ್ನದ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.  

Author:

...
Sushmitha N

Copy Editor

prajashakthi tv

share
No Reviews