HEALTH TIPS: ಮಲಗುವ ಮುನ್ನ ಅಶ್ವಗಂಧ ಚಹಾ ಕುಡಿಯೋದ್ರಿಂದ ಆಗುವ ಉಪಯೋಗಳು

ಆಯುರ್ವೇದ ಉತ್ಪನ್ನಗಳಲ್ಲಿ ಅನೇಕ ಗಿಡಮೂಲಿಕೆಗಳು ಬಳಕೆಯಾಗಿರುತ್ತವೆ. ಅದರಲ್ಲಿ ಅಶ್ವಗಂಧ ಕೂಡ ಒಂದು. ಆಯುರ್ವೇದ ಗಿಡಮೂಲಿಕೆಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾದ ಗಿಡಮೂಲಿಕೆ ಎಂದರೆ ಅದು ಅಶ್ವಗಂಧಹಲವಾರು ಆಯುರ್ವೇದ ಉತ್ಪನ್ನಗಳಲ್ಲಿ ಇದು ಬಳಕೆಯಾಗುತ್ತದೆ. ಮಾನಸಿಕ ಒತ್ತಡ ನಿವಾರಣೆಯಲ್ಲಿ ಪ್ರಮುಖವಾಗಿ ಕೆಲಸ ಮಾಡುವ ಅಶ್ವಗಂಧ ನಮ್ಮ ರಕ್ತದ ಒತ್ತಡ,ಬ್ಲಡ್ ಶುಗರ್ ಮತ್ತು ಇನ್ನಿತರ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ನಮ್ಮ ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟಂತೆ ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಕಾರ್ಟಿಸಾಲ್ ಹಾರ್ಮೋನ್ ಪ್ರಮಾಣ ವನ್ನು ತಗ್ಗಿಸುವಲ್ಲಿ ಇದು ನೆರವಾಗುತ್ತದೆ.

 

ಅಶ್ವಗಂಧ ಚಹಾ ಕುಡಿಯುವುದರಿಂದ ಲಾಭಗಳು:

ಒತ್ತಡ ನಿವಾರಣೆಗೆ ರಾತ್ರಿ ವೇಳೆ ಅಶ್ವಗಂಧ ಚಹಾ ಕುಡಿಯೋದ್ರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ.

*ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ

ಅಶ್ವಗಂಧ ಚಹಾವು ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಒಳಗೊಂಡಿದೆ. ರಾತ್ರಿ ಮಲಗುವ ಮುನ್ನ ಇದರ ಸೇವನೆಯಿಂದ ಬಲವಾದ ಹಾಗೂ ಶಾಂತವಾದ ನಿದ್ರೆಗೆ ಸಹಕರಿಸುತ್ತದೆ.

*ಒತ್ತಡ ನಿಯಂತ್ರಿಸುತ್ತದೆ

ಅಶ್ವಗಂಧ ಚಹ ಒತ್ತಡವನ್ನು ನಿವಾರಿಸುವಗುಣಗಳನ್ನು ಹೊಂದಿದೆ. ಒತ್ತಡದ ಹಾರ್ಮೋನ್‌ ಕಾರ್ಟಿಸೋಲ್ ಅನ್ನು ನಿಯಂತ್ರಿಸುತ್ತದೆ. ರಾತ್ರಿ ವೇಳೆ ಅಶ್ವಗಂಧ ಚಹಾವನ್ನು ಕುಡಿಯೋದ್ರಿಂದ ಕಾರ್ಟಿಸೋಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಅಶ್ವಗಂಧದಲ್ಲಿ ಚಹಾದಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಆಯುರ್ವೇದ ಪದ್ಧತಿಯಲ್ಲಿ ಅತ್ಯಂತ ಪ್ರಮುಖವಾದ ಗಿಡಮೂಲಿಕೆ ಎಂದು ಗುರುತಿಸಲಾಗಿದೆ. ಮಾನಸಿಕ ಒತ್ತಡ ಇರುವಂತಹ ಸಮಯದಲ್ಲಿ ಅಶ್ವಗಂಧ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಒಳ್ಳೆಯ ನಿದ್ರೆ ಬಂದು ಮಾನಸಿಕವಾಗಿ ಕೂಡ ಅನುಕೂಲವಾಗುತ್ತದೆ.

*ಜೀರ್ಣ ಶಕ್ತಿ ಹೆಚ್ಚಾಗುತ್ತದೆ

ಅಶ್ವಗಂಧ ಚಹಾ ಕುಡಿಯುವುದರಿಂದ ಅಜೀರ್ಣತೆ ದೂರವಾಗುತ್ತದೆ.ಮುಖ್ಯವಾಗಿ ಉರಿಯುತ ಕಡಿಮೆಯಾಗಿ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ರಾತ್ರಿಯ ಹೊತ್ತು ನೆಮ್ಮದಿಯ ನಿದ್ರೆ ಬರುತ್ತದೆ.

 

 

 

 

 

 

Author:

share
No Reviews