ಬೆಳಗಾವಿ : ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು | ವೈದ್ಯರ ನಿರ್ಲಕ್ಷ್ಯ ಆರೋಪ

ಮೃತ ಬಾಣಂತಿ ಕೀರ್ತಿ ನೇಸರಗಿ (19)
ಮೃತ ಬಾಣಂತಿ ಕೀರ್ತಿ ನೇಸರಗಿ (19)
ಬೆಳಗಾವಿ

ಬೆಳಗಾವಿ:

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದ್ದು, ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ಬೆಳಗಾವಿಯ ಗೋಕಾಕ್‌ ತಾಲೂಕಿನ ಲಗಮೇಶ್ವರ ಗ್ರಾಮದ ಕೀರ್ತಿ ನೇಸರಗಿ (19) ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದಾರೆ, ಈಕೆ ಎರಡು ದಿನದ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ತೀವ್ರ ರಕ್ತ ಸ್ರಾವವಾಗುತ್ತಿದ್ದರೂ ವೈದ್ಯರು ಜನರಲ್‌ ವಾರ್ಡ್‌ ಗೆ ಸ್ಥಳಾಂತರಿಸಿದ್ದರೂ, ಮಹಿಳೆಗೆ ತೀವ್ರ ರಕ್ತ ಸ್ರಾವದಿಂದ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಕೂಡಲೇ ವೈದ್ಯರು ಐಸಿಯು ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಮೃತಪಟ್ಟಿದ್ದಾರೆ.

ಬಿಮ್ಸ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಲೇ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಮೃತಳ ಕುಟುಂಬಸ್ಥರು ವೈದ್ಯರ ವಿರುದ್ದ ಆರೋಪಿಸಿ ಪ್ರತಿಭಟನೆಯನ್ನು ನಡೆಸಿದರು. ಈ ಕುರಿತು ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

share
No Reviews