ತುಮಕೂರು:
ತುಮಕೂರಿನ ಎಸ್.ಪಿ ಕಚೇರಿಯಲ್ಲಿ ಬ್ಯಾಂಕ್ ಆಫ್ ಬರೋಡವತಿಯಿಂದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಎಸ್ಪಿ ಕೆ.ವಿ ಅಶೋಕ್, ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ ಬರೋಡಾ ಸಮಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸೇರಿ ಹಲವರು ಭಾಗಿಯಾಗಿದ್ರು.
ಬ್ಯಾಂಕ್ ಆಫ್ ಬರೋಡಾ ತನ್ನ 'ಬರೋಡಾ ಪೊಲೀಸ್ ಫೋರ್ಸಸ್ ಸ್ಯಾಲರಿ ಪ್ಯಾಕೇಜ್'ಮೂಲಕ ಪೊಲೀಸ್ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ವಿಶೇಷ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಜೀವನಪೂರ್ತಿ ಉಚಿತ ರೂ̧ಪೇ. ಡೆಬಿಟ್ ಕಾರ್ಡ್ ಮತ್ತು ರೂ. 30 ಲಕ್ಷವರೆಗೆ ವಿಮಾ ಸೇವೆಯನ್ನುಒದಗಿಸುತ್ತಿದೆ. ಇದ್ರ ಜೊತೆಗೆ ಎರಡು ಕೋಟಿ ಒಳಗೆ ಗೃಹ ಸಾಲ, ಕರ್ತವ್ಯದಲ್ಲಿದ್ದಾಗಲೇ ಅಗಲಿದ್ರೆ ಅಂತಹವರಿಗೆ ವಿಶೇಷ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಬರೋಡಾ ಪೊಲೀಸ್ ಫೋರ್ಸಸ್ ಸ್ಯಾಲರಿ ಪ್ಯಾಕೇಜ್ ವತಿಯಿಂದ 10 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಲಾಯ್ತು. ಈ ವೇಳೆ ಮಾತನಾಡಿದ ಬರೋಡ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಕೋದಂಡರಾಮಯ್ಯ, ಪೊಲೀಸ್ ಪ್ಯಾಕೇಜ್ ಮುಖಾಂತರ ತುಮಕೂರು ಜಿಲ್ಲೆಯ ಎಲ್ಲಾ ಪೊಲೀಸರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ, ಎಲ್ಲರೂ ಸಹ ಈ ಪೊಲೀಸ್ ಪ್ಯಾಕೇಜ್ ಗೆ ನೊಂದಣಿಯಾಗಿ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ವೆಂಕಟ್, ಮಾತನಾಡಿ ಒಂದು ಕಾಲದಲ್ಲಿ ಪೋಲಿಸ್ ಅಂದರೆ ಲೋನ್ ಕೊಡುತ್ತಿರಲಿಲ್ಲ. ಆ ಕಾಲದಿಂದ ಈ ಕಾಲಕ್ಕೆ ಬಂದಿದ್ದೇವೆ ಇದು ಒಳ್ಳೆ ಬೆಳವಣಿಗೆ,ನಾನು ಬಂದಾಗಿಂದ ನಾಲ್ಕೈದು ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯ ಮಾಡುವ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆದವೇಳೆ ಬ್ಯಾಂಕ್ ಆಫ್ ಬರೋಡ ದವರು ಸಹಾಯ ಮಾಡಿದ್ದಾರೆ, ಎಂದು ಅಭಿನಂದನೆ ಸಲ್ಲಿಸಿದರು.