BANGALORE : ಬೆಂಗಳೂರು ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ, ಭಾರತೀಯ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಸುಮಾರು ₹1,100 ಕೋಟಿಯ ಬಂಡವಾಳ ಹೂಡಿಕೆಯಿಂದ 31 ಎಕರೆ ವಿಸ್ತೀರ್ಣದಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (MRO - Maintenance, Repair & Overhaul) ಕೇಂದ್ರವನ್ನು ಸ್ಥಾಪಿಸಲಿದೆ.
ಈ ಹೊಸ MRO ಕೇಂದ್ರದ ಸ್ಥಾಪನೆಯು ಕರ್ನಾಟಕದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ದಾರಿ ಮಾಡಿಕೊಡಲಿದೆ. ಇದು ಕೇವಲ ತಾಂತ್ರಿಕ ಸೌಲಭ್ಯವಷ್ಟೇ ಅಲ್ಲ, ರಾಜ್ಯದ ಅರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಗೆ ಬಲ ನೀಡುವ ಹೆಜ್ಜೆಯಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, ಕರ್ನಾಟಕವನ್ನು ಏಷ್ಯಾದ MRO ಹಬ್ ಆಗಿ ರೂಪಿಸುವ ದೃಷ್ಟಿಕೋನಕ್ಕೆ ಇದು ಒಂದು ಬಲವಂತದ ಮೆಲುಕು. ಈ ಮೂಲಕ ರಾಜ್ಯಕ್ಕೆ ಜಾಗತಿಕ ಹೂಡಿಕೆಗಳು ಮತ್ತು ಅವಕಾಶಗಳು ಹರಿದುಬರಲಿವೆ ಎನ್ನಲಾಗ್ತಿದೆ.