ಬಾಗಲಕೋಟೆ : ಪಿಯುಸಿ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ..!

ಮೃತ ವಿದ್ಯಾರ್ಥಿನಿ ತೇಜಸ್ವಿನಿ (17)
ಮೃತ ವಿದ್ಯಾರ್ಥಿನಿ ತೇಜಸ್ವಿನಿ (17)
ರಾಜ್ಯ

ಬಾಗಲಕೋಟೆ:

ಇತ್ತೀಚಿನ ದಿನಗಳಲ್ಲಿ ಯುವಜನತೆ ಸಣ್ಣ ಸಣ್ಣ ವಿಷಯಗಳಿಗೆ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತಹ ಪ್ರಕರಣಗಳು ಸಂಭವಿಸುತ್ತಲೇ ಇವೆ. ಇದೀಗ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.

17 ವರ್ಷದ ತೇಜಸ್ವಿನಿ ದೊಡ್ಡಮನಿ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಮುಧೋಳ ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್‌ ಓದುತ್ತಿದ್ದು, ಗುರುವಾರ ನಡೆದ ರಸಾಯನಶಾಸ್ತ್ರ ವಿಷಯದ ಫೈನಲ್‌ ಪರೀಕ್ಷೆಯಲ್ಲಿ ತೇಜಸ್ವಿನಿ ನಕಲು ಮಾಡುವುದನ್ನು ಕಾಲೇಜು ಸಿಬ್ಬಂದಿ ಗಮನಿಸಿ ಪ್ರಶ್ನೆ ಮಾಡಿದ್ದರಂತೆ. ಈ ವಿಚಾರವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದಳು, ಪೋಷಕರು ಫೆ.28ರಂದು ಕಾಲೇಜಿಗೆ ಬಂದು ನಕಲು ಬಗ್ಗೆ ಪ್ರಶ್ನಿಸಿದಾಗ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮರಾ ದೃಶ್ಯಾವಳಿ ತೋರಿಸಿ ಪೋಷಕರ ಮುಂದೆಯೇ ಬುದ್ದಿವಾದ ಹೇಳಿದ್ದಾರೆ, ಇದರಿಂದ ಮನನೊಂದ ವಿದ್ಯಾರ್ಥಿನಿ ಕಾಲೇಜಿನಿಂದ ಹೊರಹೋಗಿದ್ದು, ಕಾಣೆಯಾಗಿದ್ದಳು, ಆನಂತರ ವಿದ್ಯಾರ್ಥಿನಿ ಪೋಷಕರು ಮುಧೋಳ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ವಿದ್ಯಾರ್ಥಿನಿಯ ಮೃತದೇಹ ಇಂದು ಮಹಾರಾಣಿ ಕೆರೆಯಲ್ಲಿ ಪತ್ತೆಯಾಗಿದೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಮುಧೋಳ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Author:

...
Editor

ManyaSoft Admin

Ads in Post
share
No Reviews