ಸಿನಿಮಾ:
ನಟಿ ಹರ್ಷಿಕಾ ಪೂರ್ಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ತ್ರಿದೇವಿ ಪೊನ್ನಕ್ಕ ನಾಮಕರಣ ಮಾಡಿದ್ದಾರೆ. ಇದೇ ವೇಳೆ ತಮ್ಮ ಮಗುವಿನ ಪೋಟೋವನ್ನು ರಿವೀಲ್ ಮಾಡಿದರು.
ತಮ್ಮ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಸಂಪ್ರದಾಯಿಕ ಶೈಲಿಯಲ್ಲಿಯೇ ಮಾಡಿಕೊಂಡು ಬಂದ ಈ ಜೋಡಿ, ಇದೀಗ ತಮ್ಮ ಮಗುವಿಗೂ ಸಹ ಸಾಂಪ್ರದಾಯಿಕ ಹೆಸರನ್ನೇ ಇಟ್ಟಿದ್ದಾರೆ.
ಅಲ್ದೇ ನಾಮಕರಣದಂದು ಸಹ ಮಗುವಿಗೆ ಕೊಡವ ಶೈಲಿಯಲ್ಲೇ ಉಡುಗೆಗಳನ್ನ ತೊಡಿಸಿದ್ದು ವಿಶೇಷವಾಗಿತ್ತು. ನಾಮಕರಣ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದವರು ಸೇರಿದಂತೆ ಆಪ್ತ ಗೆಳೆಯರು ಭಾಗಿಯಾಗಿದ್ದರು.