ಬೆಂಗಳೂರು : ಶಿವರಾಜ್ ಕುಮಾರ್ ನಿವಾಸದಲ್ಲಿ ನಟರ ಸಭೆ | ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರು ಸೀಕ್ರೆಟ್‌ ಮೀಟಿಂಗ್‌ ನಡೆಸಿದ್ದಾರೆ. ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಹಾಗೂ ಕನ್ನಡ ಇಂಡಸ್ಟ್ರಿ ಉಳಿಸಲು ನಾಗವಾರದ ಶಿವಣ್ಣ ಅವರ ನಿವಾಸದಲ್ಲಿ ಸಭೆಯನ್ನು ನಡೆಸಲಾಗಿದೆ.

ಈ ಮೀಟಿಂಗ್‌ನಲ್ಲಿ ನಟ ಗಣೇಶ್‌, ದುನಿಯಾ ವಿಜಯ್‌, ಧ್ರುವ ಸೇರಿದಂತೆ ಹಲವು ನಟರು ಹಾಗೂ ಚಿತ್ರ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. OTT ಪ್ಲಾಟ್‌ಫಾರ್ಮ್‌ಗಳ ಪ್ರಭಾವ, ನಿಖರ ತಪಾಸಣೆಯಿಲ್ಲದೆ ಬಿಡುಗಡೆಯಾಗುತ್ತಿರುವ ಸಿನೆಮಾಗಳ ಬಗ್ಗೆ ನಿಯಮಾವಳಿ ತರುವ ಅಗತ್ಯ ಹಾಗೂ ಚಿತ್ರಮಂದಿರಗಳ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳು ಚರ್ಚೆ ಮಾಡಲಾಗಿದ್ದು, ಶೀಘ್ರದಲ್ಲೇ ಎಲ್ಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಚರ್ಚೆ ಮಾಡಿದೆ ಎನ್ನಲಾಗ್ತಿದೆ.

ಇಂತಹ ನಿರ್ಣಾಯಕ ಸಭೆಯಲ್ಲಿ ಹಿರಿಯರು ಸೇರಿದಂತೆ ಹೊಸ ತಲೆಮಾರಿಗೆ ಸೇರಿದ ಕಲಾವಿದರು ಕೂಡ ಭಾಗವಹಿಸಿದ್ದು, ಇಡೀ ಚಿತ್ರರಂಗ ಒಂದುಗೂಡಿ ಚರ್ಚೆ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ.

 

Author:

...
Sushmitha N

Copy Editor

prajashakthi tv

share
No Reviews