Actor ವಿಜಯ್‌ : ಇಳಯ ದಳಪತಿಗೆ ಬಿಗ್ ಶಾಕ್ | ವಿಜಯ್ ವಿರುದ್ಧ ತಿರುಗಿಬಿದ್ದ ಮುಸ್ಲಿಮರು

ದಳಪತಿ ವಿಜಯ್‌ :

ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದ ದಳಪತಿ ವಿಜಯ್‌ ಅವರ ಪಕ್ಷಕ್ಕೆ ಮುಸ್ಲಿಂ ಸಮುದಾಯ ಬಿಗ್‌ ಶಾಕ್‌ ನೀಡಿದೆ. ತಮಿಳುನಾಡಿನಲ್ಲಿ ಹೊಸ ರಾಜಕೀಯ ಯುಗ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ತಮಿಳು ನಟ ವಿಜಯ್‌ ಸ್ಥಾಪನೆ ಮಾಡಿದ್ದರು. ಪಕ್ಷದ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರನ್ನು ಹೊಂದಿತ್ತು. ಪಕ್ಷದ ಕಾರ್ಯಕ್ರಮಕ್ಕೆ ಸೇರಿದ್ದ ಜನಸಾಗರವನ್ನು ಕಂಡು ತಮಿಳುನಾಡಿನ ಇತರೆ ರಾಜಕೀಯ ಮುಖಂಡರು ಫುಲ್‌ ಶಾಕ್‌ಗೆ ಒಳಗಾಗಿದ್ದರು. ಜಯಲಲಿತಾ ರೀತಿ ವಿಜಯ್‌ ಬಹುಬೇಗ ಅಧಿಕಾರದ ಗದ್ದುಗೆ ಏರುತ್ತಾರೆ ಎಂಬ ವಿಶ್ವಾಸವೂ ಕೂಡ ಕೇಳಿ ಬಂದಿತ್ತು. ಆದರೀಗ ವಿಜಯ್‌ ಪಕ್ಷದ ವಿರುದ್ಧ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ.

2026ರ ತಮಿಳುನಾಡಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿರುವ ದಳಪತಿ ವಿಜಯ್‌ ವಿರುದ್ಧ ಉತ್ತರ ಪ್ರದೇಶದ ಅಖಿಲ ಭಾರತ ಮುಸ್ಲಿಂ ಜಮಾ ಅತ್‌ ಮೌಲ್ವಿ ಅವರು ಫತ್ವಾ ಹೊರಡಿಸಿದ್ದಾರೆ. ಆ ಆದೇಶದಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್‌ ಪಕ್ಷಕ್ಕೆ ಮುಸ್ಲಿಂ ಸುಮುದಾಯದ ಬೆಂಬಲ ಯಾವುದೇ ಕಾರಣಕ್ಕೂ ಇಲ್ಲ ಅನ್ನೋ ಆದೇಶವನ್ನು ಹೊರಡಿಸಿದ್ದಾರೆ. ಇದ್ರಿಂದ ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸೋ ಕನಸು ಕಂಡಿರೋ ವಿಜಯ್‌ಗೆ ದೊಡ್ಡ ಶಾಕ್‌ ಎದುರಾದಂತಿದೆ.

ಮುಸ್ಲಿಂ ಬಾಂಧವರ ರಂಜಾನ್‌ ಹಬ್ಬದ ಅಂಗವಾಗಿ ತಮಿಳು ನಟ ವಿಜಯ್‌, ಮುಸ್ಲಿಂ ಬಾಂಧವರಿಗಾಗಿ ಇಫ್ತಿಯಾರ್‌ ಕೂಟವನ್ನು ಆಯೋಜನೆ ಮಾಡಿದ್ದರು. ಆದರೆ ಆ ಇಫ್ತಿಯಾರ್‌ ಕೂಟದಲ್ಲಿ ಅವರು ರಾಜಕೀಯ ಲಾಭಕ್ಕಾಗಿ ಮದ್ಯ ವ್ಯಸನಿಗಳು, ಜೂಜುಕೊರರರನ್ನು ಆಹ್ವಾನ ಮಾಡಿದ್ದರು. ಹೀಗಾಗಿ ವಿಜಯ್ ಅವರು ಮುಸ್ಲಿಂ ಸಮುದಾಯದ ನಂಬಿಕೆಗೆ ಅರ್ಹರಲ್ಲ ಎಂದು ಮೌಲ್ವಿ ಅವರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮುಂದೆ ವಿಜಯ್‌ ಅವರ ಆಯೋಜಿಸುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಉತ್ತರ ಪ್ರದೇಶದ ಅಖಿಲ ಭಾರತ ಮುಸ್ಲಿಂ ಜಮಾ ಅತ್‌ ಮೌಲ್ವಿ ಫತ್ವಾ ಹೊರಡಿಸಿದ್ದಾರೆ. ಈ ಫತ್ವಾದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ದೊಡ್ಡ ಸವಾಲು ಎದುರಾಗಿದೆ ಅಂತಾನೇ ಹೇಳಲಾಗ್ತಿದೆ.

Author:

...
Sushmitha N

Copy Editor

prajashakthi tv

share
No Reviews