SHIVRAJKUMAR: ಸೋದರಅತ್ತೆ ಆರೋಗ್ಯ ವಿಚಾರಿಸಿದ ನಟ ಶಿವಣ್ಣ

ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್
ಕನ್ನಡ

ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಹ್ಯಾಟ್ರಿಕ್‌ ಹಿರೀ ಶಿವರಾಜ್‌ ಕುಮಾರ್‌ ತಮ್ಮ 131ನೇ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಬ್ಯೂಸಿ ನಡುವೆಯೂ ಶಿವಣ್ಣ ತನ್ನ ತಂದೆ ಡಾ. ರಾಜ್‌ಕುಮಾರ್‌ ಅವರ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆ ಬಳಿಕ ನಟ ಶಿವರಾಜ್‌ಕುಮಾರ್‌ ಮತ್ತು ಪತ್ನಿ ಗೀತಾ ಗಾಜನೂರಿನಲ್ಲಿರುವ ಸೋದರತ್ತೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬಂಧುಗಳ ಜೊತೆಗೆ ಕೆಲ ಹೊತ್ತು ಸಮಯವನ್ನು ಕಳೆದಿದ್ದಾರೆ.

ಶಿವರಾಜ್‌ ಕುಮಾರ್‌  ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಇದೇ ಮೊದಲ ಬಾರಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ. ಡಾ.ರಾಜ್​ಕುಮಾರ್​ ಅವರ ಸಹೋದರಿ ನಾಗಮ್ಮರವರ ಆರೋಗ್ಯ ವಿಚಾರಿಸಿ ಅವರ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ, ಶಿವಣ್ಣ ಅವರನ್ನು ನೋಡುತ್ತಿದ್ದಂತೆ ಸೋದರತ್ತೆ ನಾಗಮ್ಮ ಅವರು ಮುದ್ದಾಡಿದ್ದಾರೆ.

Author:

share
No Reviews