ಜೈಲಲ್ಲಿ Pavithra Gowda ಬೇರೆ ಬ್ಯಾರಕ್ಗೆ ಸ್ಥಳಾಂತರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪವಿತ್ರಾಗೌಡ ಅವರನ್ನು ಜೈಲು ಅಧಿಕಾರಿಗಳು ಮತ್ತೊಂದು ಬ್ಯಾರಕ್ಗೆ ಸ್ಥಳಾಂತರಿಸಿದ್ದಾರೆ. ಇದುವರೆಗೆ ಇಬ್ಬರು ಕೈದಿಗಳಿದ್ದ ಬ್ಯಾರಕ್ನಲ್ಲಿದ್ದ ಅವರನ್ನು ಇದೀಗ 16 ಕೈದಿಗಳಿರುವ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿದೆ.
ನ್ಯಾಯಾಧೀಶರ ಮುಂದೆ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಎಲ್ಲಾ ಆರೋಪಿಗಳು ವಿಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲಾ ಆರೋಪಿಗಳು ವಿಸಿ ಮೂಲಕ ಹಾಜರಾದ ಸಂದರ್ಭದಲ್ಲಿ ಪವಿತ್ರಾ ಘೊಡದಾ ಅವರು ತಡವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು ಎನ್ನಲಾಗಿದೆ.
ಇದನ್ನು ಓದಿ : A1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ !

Pavithra Gowda ಜೈಲಲ್ಲಿ ಬೇರೆ ಸೆಲ್ಗೆ ಶಿಫ್ಟ್!
ಅಷ್ಟೇ ಅಲ್ಲದೇ ಪವಿತ್ರಾಗೌಡ ವಿಸಿಯಲ್ಲಿ ಹಾಜರಾಗಿದ್ದಾಗ ಕಿವಿಯಲ್ಲಿ ಏರ್ಬಡ್ಸ್ ಬಳಕೆ ಮಾಡಿದ್ದರು. ನ್ಯಾಯಾಧೀಶರು ಮಹಿಳಾ ಬ್ಯಾರಕ್ನಲ್ಲಿ ಏರ್ಬಡ್ಸ್ ಬಳಕೆ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಏರ್ಬಡ್ಸ್ ಬಳಕೆ ಮಾಡಿರುವ ಬಗ್ಗೆ ಜೈಲು ಅಧಿಕಾರಿಗಳಿಂದ ನ್ಯಾಯಾಧೀಶರು ಸ್ಪಷ್ಟನೆ ಕೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪವಿತ್ರಾಗೌಡ ಬ್ಯಾರಕ್ನ ಶಿಫ್ಟ್ ಮಾಡಲಾಗಿದೆ.

ಇದನ್ನು ನೋಡಿ : ಹೈವೇಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ ಪುಂಡರ ಹುಚ್ಚಾಟಕ್ಕೆ ಸವಾರರು ಕಂಗಾಲು




