LKG, UKG In Anganwadis : ರಾಜ್ಯಾದ್ಯಂತ 70,000 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 50,000 ಅಂಗನವಾಡಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ರಾಜ್ಯದ 5,000 ಅಂಗನವಾಡಿ ಕೇಂದ್ರಗಳಲ್ಲಿ ನವೆಂಬರ್ 28ರಿಂದ ಎಲ್ಕೆಜಿ ಮತ್ತು ಯುಕೆಜಿ (LKG And UKG) ತರಗತಿಗಳನ್ನು ಆರಂಭಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebalkar) ಗುರುವಾರ ಘೋಷಿಸಿದರು.
ನವೆಂಬರ್ 28 ರಿಂದ LKG And UKG ತರಗತಿ ಪ್ರಾರಂಭ
ವಿಧಾನಸೌಧದಲ್ಲಿ ನಡೆದ 25ನೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ತಿನಲ್ಲಿ ಮಕ್ಕಳಿಂದ ಬಂದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, “ನಾನು ಸಚಿವಳಾದ ಬಳಿಕ ಕಳೆದ ಎರಡೂವರೆ ವರ್ಷಗಳಲ್ಲಿ ಅಂಗನವಾಡಿ ಕ್ಷೇತ್ರಕ್ಕೆ 200 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ನವೆಂಬರ್ 28, 2025 ರಿಂದ 5,000 ಅಂಗನವಾಡಿಗಳಲ್ಲಿ ಎಲ್ಕೆಜಿ–ಯುಕೆಜಿ ತರಗತಿಗಳನ್ನು ಪ್ರಾರಂಭಿಸುವುದು ಮಹತ್ವದ ಹೆಜ್ಜೆ” ಎಂದು ಹೇಳಿದರು.
ಇದನ್ನು ಓದಿ : Dina Bhavishya : ದಿನ ಭವಿಷ್ಯ 21 ನವೆಂಬರ್ 2025

ಸೌಲಭ್ಯ ಕೊರತೆ ಇನ್ನೂ ಸವಾಲು
ಸಚಿವರು ಅಂಗನವಾಡಿಗಳಲ್ಲಿ ಸ್ಥಳಾವಕಾಶ ಮತ್ತು ಸೂಕ್ತ ತರಗತಿ ಕೊಠಡಿಗಳ ಕೊರತೆಯ ಸಮಸ್ಯೆಯನ್ನು ಒಪ್ಪಿಕೊಂಡು, “ಇದು ಜಾರಿಗೊಳಿಸಲು ಕೆಲವು ಸವಾಲುಗಳಿವೆ. ಆದರೆ ಹಂತ ಹಂತವಾಗಿ ಪರಿಹರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಸರ್ಕಾರದ ವರದಿ ಪ್ರಕಾರ, ರಾಜ್ಯದಲ್ಲಿ 70,000 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 50,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ.
ಇದನ್ನು ನೋಡಿ : ಗುಬ್ಬಿ ಬಳಿ ಭೀಕರ ಕಾರು ಅಪಘಾ* – ಕಾರು ಪಲ್ಟಿ ಆದ್ರು ಪ್ರಯಾಣಿರು ಬಚಾವ್




