Kapaleeshwar ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮನಕಲಕುವ ಘಟನೆ ನಡೆದಿದೆ.

ನಗರದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ Kapaleeshwar ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಈಜಲು ತೆರಳಿದ ಮಕ್ಕಳು ನೀರಿನ ಆಳ ತಿಳಿಯದೇ ಅಪಾಯಕ್ಕೆ ಒಳಗಾಗಿದ್ದಾರೆ.
ಶಿವಾಜಿ ನಗರದ ಶಿವಂ ಪರಶುರಾಮ ಸುಂಡೀಕರ್ (7) ಮತ್ತು ಶಹಾಪುರ ಜೇಡಗಲ್ಲಿಯ ಪರಶುರಾಮ ರಾಜು ನೀಲಜಕರ್ (11) ಮೃತರಾದ ಬಾಲಕರು. ಘಟನೆ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಹಾಗೂ State Disaster Response Force ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು.
MUST READ : CSK vs MI : ಇದು ನಮ್ಮ ಸೀಸನ್ ಅಲ್ಲ – ದುಃಖಿತರಾದ ಹಾರ್ದಿಕ್ ಪಾಂಡ್ಯ..!!

ಸತತ ಕಾರ್ಯಾಚರಣೆಯ ಬಳಿಕ ಶಿವಂ ಮೃತದೇಹ ಪತ್ತೆಯಾಗಿದೆ. ನೀರಿನಲ್ಲಿ ಬಿದ್ದಾಗ ತಲೆಗೆ ಕಲ್ಲಿನ ಪೆಟ್ಟು ಬಿದ್ದಿರುವುದರಿಂದ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೊಬ್ಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ದುರ್ಘಟನೆ ಸುದ್ದಿ ತಿಳಿದ ತಕ್ಷಣ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
MUST WATCH : ಸಿದ್ಧಗಂಗಾ ಮಠಕ್ಕೆ VIJAYENDRA VISIT – BSY ಅಭಿಮಾನೋತ್ಸವಕ್ಕೆ ಭರ್ಜರಿ ಸಿದ್ಧತೆ..!




