IPL ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ.

IPL ಟೂರ್ನಿ ಪ್ಲೇಆಫ್ ಹಂತದತ್ತ ಸಾಗುತ್ತಿದ್ದಂತೆ ಪಂದ್ಯಗಳ ರೋಚಕತೆ ಹೆಚ್ಚಾಗಿದ್ದು, ವೀಕ್ಷಕರ ಸಂಖ್ಯೆಯಲ್ಲೂ ಹೊಸ ದಾಖಲೆ ನಿರ್ಮಾಣವಾಗಿದೆ. ಅಧಿಕೃತ ಪ್ರಸಾರ ಸಂಸ್ಥೆಯಾದ ಜಿಯೋಸ್ಟಾರ್ (JioStar) ತನ್ನ ಟಿವಿ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಭಾರೀ ಪ್ರಮಾಣದ ವೀಕ್ಷಕರನ್ನು ಸೆಳೆದಿದೆ.

50 ಕೋಟಿ ದಾಟಿದ TV ವೀಕ್ಷಕರ ಸಂಖ್ಯೆ
ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ಟೂರ್ನಿಯ ಒಟ್ಟಾರೆ ವೀಕ್ಷಕರ ಸಂಖ್ಯೆ 110 ಕೋಟಿ ದಾಟಿದೆ. ಟಿವಿ ವೀಕ್ಷಕರ ಸಂಖ್ಯೆ 50 ಕೋಟಿ ಗಡಿಯತ್ತ ಮುನ್ನಡೆಯುತ್ತಿದ್ದು, ಪ್ರಸಾರ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ.

READ THIS : Koppal ದಲ್ಲಿ ಭೀಕರ ರಸ್ತೆ ಅಪಘಾತ – 7 ಮಂದಿ ಸಾವು..!!
ದಾಖಲೆ ಬರೆದ ಜಿಯೋಸ್ಟಾರ್
ಡಿಜಿಟಲ್ ವೇದಿಕೆಗಳಲ್ಲಿ ವೀಕ್ಷಕರ ಸಂಖ್ಯೆ ಶೇ.15ರಷ್ಟು ಏರಿಕೆಯಾಗಿದೆ. ಜೊತೆಗೆ ವೀಕ್ಷಣೆಯ ಅವಧಿಯೂ ಶೇ.7ರಷ್ಟು ಹೆಚ್ಚಳ ಕಂಡಿದೆ. ವಿಶೇಷವಾಗಿ ಕನೆಕ್ಟೆಡ್ ಟಿವಿ (CTV) ವಿಭಾಗದಲ್ಲಿ ಶೇ.25ರಷ್ಟು ಬೆಳವಣಿಗೆ ದಾಖಲಾಗಿದ್ದು, ವೀಕ್ಷಣಾ ಸಮಯವೂ ಶೇ.20ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮುಂದಿನ ಪಂದ್ಯಗಳಲ್ಲಿ ಭಾರೀ ವೀಕ್ಷಣೆ ನಿರೀಕ್ಷೆ
ಐಪಿಎಲ್ ಟೂರ್ನಿಯ ಕ್ರೇಜ್ ದೇಶದಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿವಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರೇಕ್ಷಕರ ತೊಡಗು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಪ್ಲೇಆಫ್ ಹಂತ ಸಮೀಪಿಸುತ್ತಿದ್ದಂತೆ ಮುಂದಿನ ಪಂದ್ಯಗಳಿಗೂ ಭಾರೀ ವೀಕ್ಷಣೆ ನಿರೀಕ್ಷಿಸಲಾಗಿದೆ.

MUST WATCH : DKS BIRTHDAYಗೆ CM GIFT ಕೊಡ್ತೀರಾ..? -ವಿಡಿಯೋ ಮೂಲಕ ಕಾಲೆಲೆದ ಜೆಡಿಎಸ್

