Ramya Birthday : ಸ್ಯಾಂಡಲ್ವುಡ್ನ ಮೋಹಕತಾರೆ ನಟಿ ರಮ್ಯಾ (Actress Ramya) ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಸ್ಯಾಂಡಲ್ವುಡ್ನ ಮೋಹಕತಾರೆ ನಟಿ ರಮ್ಯಾ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಜನಪ್ರಿಯ ನಟಿಯಾಗಿರುವುದಲ್ಲದೆ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿರುವ ರಮ್ಯಾ, ಇದೀಗ ಮತ್ತೆ ಸಿನಿಮಾ ಜಗತ್ತಿನಲ್ಲಿ ಸಕ್ರಿಯಗೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಮ್ಬ್ಯಾಕ್ಗೆ ಸಿದ್ಧತೆ
ಸದ್ಯ ರಮ್ಯಾ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿದ್ದಾರಂತೆ. ಅದರಲ್ಲಿ ಒಂದು ಐತಿಹಾಸಿಕ ಸಿನಿಮಾದ ಸ್ಕ್ರಿಪ್ಟ್ ಓಕೆ ಮಾಡಿದ್ದಾರೆ ಎನ್ನಲಾಗ್ತಿದೆ.
ಇದನ್ನು ಓದಿ : Gold Price Today|ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ

ಅಭಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ
ಅಭಿ ಸಿನಿಮಾ ಮೂಲಕ ಅಪ್ಪು ಜೊತೆ ತೆರೆಹಂಚಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. ನಟಿ ರಮ್ಯಾ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ದಕ್ಷಿಣದ ಭಾರದಲ್ಲಿ ಖ್ಯಾತಿ ಪಡೆದಿದ್ದಾರೆ. ಜೊತೆಗೆ ಸಂಸದೆಯಾಗಿ ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ ನಟಿ ರಮ್ಯಾ.
ಹೊಸ ಸಿನಿಮಾದತ್ತ ರಮ್ಯಾ ಹೆಜ್ಜೆ
ರಮ್ಯಾ ಈಗ ಹೊಸ ಸಿನಿಮಾದ ನಿರ್ಮಾಣಕ್ಕೂ ಮುಂದಾಗಿದ್ದು, ತಮಗಿಷ್ಟವಾದ ಕಥೆ ಹುಡುಕುವ ಕೆಲಸದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ರಮ್ಯಾ ಅವರಿಗೆ ಕಥೆ ರೆಡಿಯಾಗಿದೆ ಎಂದು ಹೇಳಿದ್ಧಾರೆ, ರಮ್ಯಾ ಕೂಡಾ ತಾವು ಈಗಾಗಲೇ ಒಂದಿಷ್ಟು ಕಥೆಗಳನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಸದ್ಯದಲ್ಲಿಯೇ ರಮ್ಯಾ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನು ನೋಡಿ : ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವುದು ಯಾರು?

