Current Shock : ವಿದ್ಯುತ್ ಶಾಕ್ ತಗುಲಿ 24 ವರ್ಷದ ಯುವತಿ ಜೀವ ಕಳೆದುಕೊಂಡ ದಾರುಣ ಘಟನೆ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ.

ವಿದ್ಯುತ್ ಶಾಕ್ ತಗುಲಿ 24 ವರ್ಷದ ಯುವತಿ ಜೀವ ಕಳೆದುಕೊಂಡ ದಾರುಣ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ. 24 ವರ್ಷದ ಮೇಘನಾ (Meghana) ಎಂಬುವವರು ಮೃತ ದುರ್ದೈವಿಯಾಗಿದ್ದಾರೆ.
ಇದನ್ನು ನೋಡಿ : ಇಲ್ಲಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಅಂಗಡಿ ಇರಂಗಿಲ್ಲ -ಸರ್ಕಾರಕ್ಕೆ ಹೈಕೋರ್ಟ್ 2 ತಿಂಗಳ ಡೆಡ್ಲೈನ್
ವಿದ್ಯುತ್ ಶಾಕ್ ಹೊಡೆದು ಸಾವು
ಮೇಘನಾ ಮನೆಯಲ್ಲಿದ್ದ ಮೋಟಾರ್ ಬಂದ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಶಾಕ್ (Electric Shock) ತಗುಲಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾದರೂ ಚಿಕಿತ್ಸೆ ಫಲಿಸದೆ ಮೇಘನಾ ಸಾವನ್ನಪ್ಪಿದ್ದಾರೆ.

ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇನ್ನು ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ : Udupi|ನಾಳೆ ಉಡುಪಿಗೆ PM ಎಂಟ್ರಿ – ಹೇಗಿದೆ ಗೊತ್ತಾ ಸರ್ಪಗಾವಲು




