RECRUITMENT : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಉಳಿಕೆ ಮೂಲವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ ಶುಕ್ರವಾರವಷ್ಟೇ ದಿನಾಂಕ ವಿಸ್ತರಣೆ ಮಾಡಿ ಮಾಹಿತಿ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಕೆಇಎ ಗುಡ್ ನ್ಯೂಸ್ ನೀಡಿದೆ.

RECRUITMENT: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿವಿಧ ಹುದ್ದೆಗಳ ಭರ್ತಿಗಾಗಿ ಆರಂಭಿಸಿದ್ದ ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳಿಂದ ಇನ್ನು ಅರ್ಜಿಗಳು ಹಾಕುತ್ತಿರುವ ಹಿನ್ನೆಲೆಯಲ್ಲಿ, ಅರ್ಜಿ ಸಲ್ಲಿಕೆ ದಿನಾಂಕವನ್ನು ನವೆಂಬರ್ 14ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಇನ್ನೂ ಸುಮಾರು 14 ದಿನಗಳ ಅವಕಾಶ ಸಿಕ್ಕಂತಾಗಿದೆ.
ಈ ಬಾರಿ ಪ್ರಾಧಿಕಾರವು ಒಟ್ಟು 33 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅವುಗಳಲ್ಲಿ —
- ವ್ಯವಸ್ಥಾಪಕರು (ಗ್ರೂಪ್ A): 4 ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು (ಗ್ರೂಪ್ B): 5 ಹುದ್ದೆಗಳು
- ಹಿರಿಯ ಸಹಾಯಕರು (ಗ್ರೂಪ್ C): 5 ಹುದ್ದೆಗಳು
- ಕಿರಿಯ ಸಹಾಯಕರು (ಗ್ರೂಪ್ C): 13 ಹುದ್ದೆಗಳು
- ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್, ಗ್ರೂಪ್ A): 1 ಹುದ್ದೆ
- ಸಹಾಯಕ ಅಭಿಯಂತರರು (ಸಿವಿಲ್, ಗ್ರೂಪ್ B): 3 ಹುದ್ದೆಗಳು
- ಸಹಾಯಕ ಅಭಿಯಂತರರು (ವಿದ್ಯುತ್, ಗ್ರೂಪ್ B): 2 ಹುದ್ದೆಗಳು
ಒಟ್ಟು 33 ಹುದ್ದೆಗಳಿಗೆ ಅಕ್ಟೋಬರ್ 8 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ವಿವಿಧ ಸರ್ಕಾರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೂ ಇದೇ ದಿನಾಂಕದವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ : KOLAR : ಕೃಷಿ ಹೊಂಡದಲ್ಲಿ ಬಿದ್ದು ತಾಯಿ–ಮಗುವಿನ ದಾರುಣ ಸಾವು..!
ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಶುಲ್ಕವನ್ನು ನವೆಂಬರ್ 15ರೊಳಗೆ ಪಾವತಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕೃತ ವೆಬ್ ಸೈಟ್ನಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
MUST WATCH: TUMAKURU | ಪ್ರಸಿದ್ಧ ಮಠದ ಆಸ್ತಿಯನ್ನೇ ನುಂಗಿದ್ರಾ? – ಮಠದ ಆಸ್ತಿ ಉಳಿಸಲು ಗ್ರಾಮಸ್ಥರ ಹೋರಾಟ




