VIJAYANAGARA: ಹೌದು ಮತ್ತೆ ರಾಮ್ ಜೀ ಗ್ಯಾಂಗ್ ಆಕ್ಟಿವ್ ಆಗಿದ್ದು, ಕಾರಿನ ಗ್ಲಾಸ್ ಹೊಡೆದು, ರಿಲೀಸ್ ಆಗಬೇಕಿದ್ದ ಸಿನಿಮಾದ ಚಿತ್ರೀಕರಣದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

VIJAYANAGARA: ಬೆಂಗಳೂರು ನಗರದಲ್ಲಿ ಮತ್ತೆ ‘ರಾಮ್ ಜೀ ಗ್ಯಾಂಗ್’ ಕೃತ್ಯಗಳು ತಲೆದೋರಿದ್ದು, ವಿಜಯನಗರದಲ್ಲಿ ಸಂಭವಿಸಿದ ಹೊಸ ಕಳ್ಳತನ ಘಟನೆಯೊಂದು ಆತಂಕ ಹುಟ್ಟಿಸಿದೆ. ‘ಐ ಆಮ್ ಗಾಡ್’ ಚಿತ್ರದ ನಿರ್ಮಾಪಕ ಹಾಗೂ ಹೀರೋ ರವಿ ಗೌಡ ಅವರ ಕಾರಿನ ಗಾಜು ಒಡೆದು, ಸಿನಿಮಾದ ಶೂಟಿಂಗ್ ವಿಡಿಯೋ ಹೊಂದಿದ್ದ ಹಾರ್ಡ್ ಡಿಸ್ಕ್ನ್ನು ಕಳ್ಳರು ಕದ್ದಿರುವ ಘಟನೆ ವಿಜಯನಗರ ಪ್ರದೇಶದಲ್ಲಿ ನಡೆದಿದೆ.
ರವಿ ಗೌಡ ತಮ್ಮ ಬಿಎಂಡಬ್ಲ್ಯೂ ಕಾರನ್ನು ವಿಜಯನಗರದಲ್ಲಿ ನಿಲ್ಲಿಸಿ ಕೆಲಸದ ನಿಮಿತ್ತ ಹೊರಹೋದಾಗ, ರಾಮ್ ಜೀ ಗ್ಯಾಂಗ್ ಕಾರಿನ ಬಳಿ ಬಂದು ಗಾಜು ಒಡೆದು ಕೃತ್ಯ ಎಸಗಿದೆ. ಇನ್ನು ಕಾರಿನೊಳಗಿದ್ದ ಹಾರ್ಡ್ ಡಿಸ್ಕ್, ₹75 ಸಾವಿರ ನಗದು, ಒಂದು ಟ್ಯಾಬ್ ಹಾಗೂ ಬೆಲೆಬಾಳುವ ಬ್ಯಾಗ್ ಕಳವು ಮಾಡಿದ್ದಾರೆ.
ಇನ್ನು ಈ ಗ್ಯಾಂಗ್ನ ಚಟುವಟಿಕೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ತಂಡವು ನೇರವಾಗಿ ತಮಿಳುನಾಡಿಗೆ ತೆರಳಿ ಶೋಧ ನಡೆಸಿದ್ದು, ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: K-SET EXAM: ನ. 2ರಂದು ಕೆ-ಸೆಟ್ ಪರೀಕ್ಷೆ- KEA ಕಟ್ಟುನಿಟ್ಟಿನ ಕ್ರಮಗಳು
ಇನ್ನು ಪೊಲೀಸರ ತಿನಖೆ ವೇಳೆ ಈ ಕಳ್ಳತನವನ್ನು ಜಯಶೀಲನ್ ಮತ್ತು ಅವನ ಮಗ ಸೇರಿ ಎಸಗಿರುವುದು ಬಹಿರಂಗವಾಗಿದ್ದು, ಸದ್ಯ ಪೊಲೀಸರು ಜಯಶೀಲನ್ನ್ನು ಬಂಧಿಸಿದ್ದಾರೆ. ಆದರೆ ಅವನ ಮಗ ಪಲಾಯನಗೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
MUST WATCH: ಬಸ್ ಗಳಿಲ್ಲದೆ ನಿತ್ಯ ವಿದ್ಯಾರ್ಥಿಗಳ ಪರದಾಟ – ಶಿರಾ ಬಸ್ ನಿಲ್ದಾಣದಲ್ಲಿ ಸ್ಟೂಡೆಂಟ್ಸ್ ಪ್ರೊಟೆಸ್ಟ್




