Draupadi Murmu : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಾ ವಾಯುಪಡೆ ನೆಲದಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಅವರು ರಫೇಲ್ನಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಭಾರತದ ಭಯೋತ್ಪಾದನಾ ವಿರುದ್ಧ ಕಾರ್ಯಾಚರಣೆಗಳು
ಐದು ತಿಂಗಳ ಹಿಂದೆ ನಡೆದ ಪಹಲ್ಗಾಮ್ ದಾಳಿ ಬಳಿಕ, ಭಾರತವು ಆಪರೇಷನ್ ಸಿಂಧೂರ ನಡೆಸಿತ್ತು. ಇದೇ ವಾಯುನೆಲೆಯಿಂದ ರಫೇಲ್ ವಿಮಾನಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕಾರ್ಯಾಚರಣೆ ನಡೆಸಿದವು. ಈ ಮೂಲಕ ಭಾರತವು ಭಯೋತ್ಪಾದನೆಯ ವಿರುದ್ಧ ಸ್ಪಷ್ಟ ಸಂದೇಶ ನೀಡಿತು.
ಇದನ್ನು ಓದಿ : ಜೈಲಿನಲ್ಲಿ ತಲೆದಿಂಬು, ಹಾಸಿಗೆ ಸೌಲಭ್ಯ ಕೇಳಿದ್ದ ದರ್ಶನ್ ಅರ್ಜಿಗೆ ಸಿಗದ ಮನ್ನಣೆ

ಮೂರು ರಾಷ್ಟ್ರಪತಿಗಳ ಹಾರಾಟ ದಾಖಲೆ
ಮುರ್ಮು ಅವರು ಯುದ್ಧ ವಿಮಾನದಲ್ಲಿ ನಡೆಸಿದ ಎರಡನೇ ಹಾರಾಟ ಇದು. ಮೊದಲ ಹಾರಾಟ ಅವರು 2023ರ ಏಪ್ರಿಲ್ 8 ರಂದು ಅಸ್ಸಾಂ, ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್ ನಲ್ಲಿ ನಡೆಸಿದ್ದರು.
ರಫೇಲ್ನಲ್ಲಿ ಹಾರಾಟದ ಮೊದಲ ಘಟನೆ
ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ವಿಮಾನದಲ್ಲಿ ಭಾರತೀಯ ರಾಷ್ಟ್ರಪತಿಯೊಬ್ಬರು ಹಾರಾಟ ನಡೆಸಿದ್ದು ಇದು ಮೊದಲು.

ಇದನ್ನು ನೋಡಿ : ರಫೇಲ್ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು




