Bengaluru Student Suicide: ಬೆಂಗಳೂರಿನಲ್ಲಿ ಮತ್ತೊಂದು ದುಃಖದ ಘಟನೆ ನಡೆದಿದೆ. ಸೀನಿಯರ್ ವಿದ್ಯಾರ್ಥಿಯ ಕಿರುಕುಳವನ್ನು ತಡೆಯಲಾರದೆ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ನಗರದಲ್ಲಿನ ಬಾಗಲೂರು ಪ್ರದೇಶದ ಪಿಜಿಯಲ್ಲಿ ನಡೆದಿದೆ.

Bengaluru Tragedy : ಮೃತ ವಿದ್ಯಾರ್ಥಿನಿ ಸನಾ ಪರ್ವೀನ್
ಮೃತಳನ್ನು ಸನಾ ಪರ್ವೀನ್ ಎಂದು ಗುರುತಿಸಲಾಗಿದೆ. ಆಕೆ ಖಾಸಗಿ ಕಾಲೇಜಿನಲ್ಲಿ BBM ಓದುತ್ತಿದ್ದಳು. ಕಳೆದ ಕೆಲವು ತಿಂಗಳಿಂದ ಸೀನಿಯರ್ ವಿದ್ಯಾರ್ಥಿಯೊಬ್ಬನ ಕಿರುಕುಳದಿಂದ ಬಳಲುತ್ತಿದ್ದಾಳೆ ಎಂಬ ಮಾಹಿತಿ ಕುಟುಂಬ ಮತ್ತು ಸ್ನೇಹಿತರಿಂದ ದೊರಕಿದೆ.
‘ಪಾಸ್ ಔಟ್’ ವಿದ್ಯಾರ್ಥಿ ರಿಫಾಸ್ ಮೇಲೆ ಆರೋಪ
Bengaluru Tragedy ಸನಾ ಸಾವಿಗೆ ರಿಫಾಸ್ ಎನ್ನುವ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಕುಟುಂಬದವರು ಪೊಲೀಸರಿಗೆ ನೀಡಿದ್ದಾರೆ. ರಿಫಾಸ್ ಕೂಡ ಇದೇ ಕಾಲೇಜಿನಲ್ಲಿ ಓದಿದ್ದು, ಈಗಾಗಲೇ ಕಾಲೇಜು ಮುಗಿಸಿಕೊಂಡಿದ್ದರೂ ಸನಾಗೆ ನಿರಂತರ ಕಿರುಕುಳ ನೀಡುತ್ತಿದ್ದನೆಂದು ಆರೋಪವಿದೆ.
ಸನಾ ಸ್ನೇಹಿತೆಯರ ಪ್ರಕಾರ, ಈತ ಕಳೆದ 10 ತಿಂಗಳಿಂದ ಸನಾಳನ್ನು ಹಿಂಸಿಸುತ್ತಿದ್ದನು. ಕೆಲವೊಮ್ಮೆ ಕಾಲೇಜಿಗೂ ಬಂದು ಆಕೆಯ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
MUST READ : Mysore News : ಮೈಸೂರಿನ ದೈಹಿಕ ಶಿಕ್ಷಕನ ವಿವಾದಾತ್ಮಕ ಜಾತಿ ಸಂದೇಶ
ಪಿಜಿಯಲ್ಲೇ ಆತ್ಮಹತ್ಯೆ ಪೊಲೀಸರಿಂದ FIR ದಾಖಲೆ
ಸನಾ ಪರ್ವೀನ್ ಬಾಗಲೂರಿನ ಪಿಜಿಯಲ್ಲಿ ವಾಸವಾಗಿದ್ದು, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬಳಿಕ ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪೊಲೀಸರು ರಿಫಾಸ್ ವಿರುದ್ಧ ಹಿಂಸಾಚಾರ ಮತ್ತು ಕಿರುಕುಳದ ಆರೋಪಗಳ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸನಾಳ ಸ್ನೇಹಿತರು ಹಾಗೂ ಪಿಜಿ ಮಾಲೀಕರಿಂದ ವಿಚಾರಣೆ ನಡೆಯುತ್ತಿದೆ.
ಸಾಮಾಜಿಕ ಕಳವಳ ಹೆಚ್ಚಿಸಿದ ಘಟನೆ
ಈ ಘಟನೆ ಬೆಂಗಳೂರು ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ನಡೆಯುತ್ತಿರುವ ಹೆಣ್ಣು ವಿದ್ಯಾರ್ಥಿನಿಯರ ಮೇಲೆ ಕಿರುಕುಳದ ಘಟನೆಗಳು ಮತ್ತೆ ಬೆಳಕಿಗೆ ತಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಸನಾಳ ಆತ್ಮಹತ್ಯೆಗೆ ನ್ಯಾಯ ಕೋರಿ ಅಭಿಯಾನ ಆರಂಭಿಸಿದ್ದಾರೆ.
MUST WATCH : TUMAKURU | ಹೆಬ್ಬೂರಿನಲ್ಲಿ ಯತಿಂದ್ರಾಗೆ ಸ್ವಾಗತ – ಕಾಂಗ್ರೆಸ್ ಮುಖಂಡರಿಂದ ಸನ್ಮಾನ




