
ASIA CUP 2025: ಭಾರತ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರೂ, ತಿಲಕ್ ವರ್ಮಾ ಅವರ ಸ್ಫೋಟಕ ಅರ್ಧಶತಕದ ಆಟದೊಂದಿಗೆ ಭಾರತ 5 ವಿಕೆಟ್ಗಳಿಂದ ಪಾಕಿಸ್ತಾನವನ್ನು (IND VS PAK) ಮಣಿಸಿ 9ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ (ASIA CUP CHAMPION) ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಭಾನುವಾರದ ಹೈವೋಲ್ಟೇಜ್ (highvoltage ) ಫೈನಲ್ ಪಂದ್ಯ(Final Match) ರೋಚಕ ಕ್ಷಣಗಳಿಂದ ಕೂಡಿದ್ದು, ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಕೇವಲ 19.1 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ, ಆರಂಭದಲ್ಲಿ ಕೆಲ ರನ್ ಒಪ್ಪಿಸಿದರೂ ಬಳಿಕ ಬೌಲರ್ಗಳು ಅದ್ಭುತ ಪ್ರದರ್ಶನವ ನೀಡಿ ಪಾಕ್ ಬ್ಯಾಟರ್ಗಳ ಬೆವರು ಇಳಿಸಿದರು.
ಟೀಮ್ ಇಂಡಿಯಾದ (TEAM INDIA) ಕುಲ್ದೀಪ್ ಯಾದವ್ 4 ವಿಕೆಟ್ಗಳಿಂದ ಮಿಂಚಿದರು. ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಇನ್ನು ಭಾರತ 147 ರನ್ಗಳ ಗುರಿ ಬೆನ್ನತ್ತಿದಾಗ, ಆರಂಭಿಕರು ತಕ್ಷಣವೇ ವಿಕೆಟ್ ಕಳೆದು ಬಿಕ್ಕಟ್ಟಿಗೆ ಸಿಲುಕಿದರು. ಆದರೆ ತಿಲಕ್ ವರ್ಮಾ (55 ರನ್) ಹಾಗೂ ಕೊನೆ ಹೊತ್ತಿಗೆ ರಿಂಕು ಸಿಂಗ್ (17) ಪಂದ್ಯವನ್ನ ಭಾರತದ ಕಡೆಗೆ ತಿರುಗಿಸಿದರು.

ಕೊನೆ ಓವರ್ನಲ್ಲಿ 10 ರನ್ ಬೇಕಾಗಿದ್ದಾಗ, ಮೊದಲ ಬಾಲ್ಗೆ 2 ರನ್, ನಂತರ ತಿಲಕ್ ಸಿಕ್ಸರ್ ಬಾರಿಸಿದರು. ನಂತರ ರಿಂಕು ಸಿಂಗ್ 4ನೇ ಎಸೆತಕ್ಕೆ ಫೋರ್ ಬಾರಿಸಿ ಗೆಲುವು ತಂದುಕೊಟ್ಟರು. “ಆಪರೇಷನ್ ಸಿಂಧೂರ”(OPERATION SINDUR) ದಂತಿದ್ದ ಈ ಮೈದಾನದಲ್ಲಿ ಕೊನೆಗೂ ಟೀಂ ಇಂಡಿಯಾ (TEAM INDIA) ತನ್ನ ಶಕ್ತಿ ಪ್ರದರ್ಶಿಸಿ ಜಯಭೇರಿ ಭಾರಿಸಿತು.
ಒಟ್ಟಿನಲ್ಲಿ ಭಾರತ ತಂಡ, ಫೈನಲ್ ಪಂದ್ಯದಲ್ಲಿ (IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ 2025ರ ಏಷ್ಯಾ ಕಪ್ (Asia Cup 2025) ಮುಡಿಗೇರಿಸಿಕೊಂಡಿತು. ಈ ಮೂಲಕ 9ನೇ ಬಾರಿ ಟೀಮ್ ಇಂಡಿಯಾ (India) ಏಷ್ಯಾ ಕಪ್ ಗೆದ್ದಂತಾಯಿತು.




