Bengaluru: ತರಕಾರಿ ದರ ಭಾರಿ ಏರಿಕೆ! ಕಂಗಾಲಾದ ಗ್ರಾಹಕರು

ಸಿಲಿಕಾನ್ ಸಿಟಿ Bengaluru ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ಶಾಕ್ ಎದುರಾಗುತ್ತಲೇ ಇದೆ. ಹೌದು ಹೋಟೆಲ್ ತಿಂಡಿಗಳ ಬೆಲೆ ಏರಿಕೆಯ ಬೆನ್ನಲ್ಲೇ, ಈಗ ತರಕಾರಿ ದರಗಳು ಕೂಡ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ 15 ದಿನಗಳ ಅಂತರದಲ್ಲಿ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದ್ದು, ಮನೆಯಲ್ಲಿ ಅಡುಗೆ ಮಾಡುವುದು ಕೂಡ ದುಬಾರಿಯಾಗಿದೆ.
ತರಕಾರಿ ದರ ಭಾರಿ ಏರಿಕೆ! ಕಂಗಾಲಾದ ಗ್ರಾಹಕರು
ರಾಜ್ಯದಲ್ಲಿ ತಾಪಮಾನ ಮತ್ತು ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿ ಇಳುವರಿ ಕಡಿಮೆಯಾಗಿದೆ. ಇನ್ನು ಇದ್ರೊಂದಿಗೆ ಮದುವೆ ಸೀಸನ್, ಜಾತ್ರೆಗಳು ಇರುವುದರಿಂದ ತರಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬರುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
READ THIS : GBA ELECTION|ಜೂನ್ 20-24ರೊಳಗೆ ಐದು ಪಾಲಿಕೆಗಳ ಚುನಾವಣೆ..!

ಬೀನ್ಸ್ಗೆ ಬಂಗಾರದ ಬೆಲೆ
ಇದೆಲ್ಲದರ ಮಧ್ಯೆ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ಗೆ ಭಾರೀ ಡಿಮ್ಯಾಂಡ್ ಇದ್ದು, ಸದ್ಯ ಒಂದು ಕೆಜಿ ಬೀನ್ಸ್ ಬೆಲೆ 200 ರೂಪಾಯಿಗೆ ತಲುಪಿದೆ.

ಇಂದಿನ ತರಕಾರಿ ದರ ಮತ್ತುಕಳೆದ ವಾರದ ಹಿಂದಿನ ದರ
| ತರಕಾರಿ | ಇಂದಿನ ದರ | ವಾರದ ಹಿಂದಿನ ದರ |
| ಬೀನ್ಸ್ | 200 ರೂ | 80 ರೂ |
| ಕ್ಯಾರೆಟ್ | 60 ರೂ | 30 ರೂ |
| ಬಟಾಣಿ | 360 ರೂ | 120 ರೂ |
| ಡಬಲ್ ಬೀನ್ಸ್ | 260 ರೂ | 120 ರೂ |
| ಸೌತೆಕಾಯಿ | 60 ರೂ | 30 ರೂ |
| ಟೊಮೆಟೋ | 60 ರೂ | 30 ರೂ |
ತರಕಾರಿ ದರ ಏರಿಕೆಯಿಂದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳ್ತಿದ್ದು, ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

MUST WATCH : ಸರ್ಕಾರಿ ವೈದ್ಯರ ವಿರುದ್ಧ ಅಪಪ್ರಚಾರ – ಗ್ರಾಮಸ್ಥರಿಂದ ವೈದ್ಯರ ಪರ ಪ್ರತಿಭಟನೆ..!




