ಇಂದು ಆದಿಚುಂಚನಗಿರಿಗೆ ಪ್ರಧಾನಿ Modi – 80 ಕೋಟಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ.

ಪ್ರಧಾನಿ ಮೋದಿ ಅವರು ಇಂದು (ಏಪ್ರಿಲ್ 15) ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಸುಮಾರು 80 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿತವಾದ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ.
ಅದ್ದೂರಿಯಾದ ಸ್ವಾಗತ
ದೆಹಲಿಯಿಂದ Modi 10:05ಕ್ಕೆ HALಗೆ ಆಗಮಿಸಿದ್ದು, ಬಳಿಕ ಅಲ್ಲಿಂದ 10:50ಕ್ಕೆ ಆದಿಚುಂಚನಗಿರಿಯ ತಪೋವನದ ಹೆಲಿಪ್ಯಾಡ್ಗೆ ಬಂದಿಳಿದಿದ್ದಾರೆ. ಈ ವೇಳೆ ಮೋದಿಗೆ ಶ್ರೀ ಮಠದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಸ್ವಾಮೀಜಿ ಅವರ ಗದ್ದುಗೆಗೆ ನಮನ ಸಲ್ಲಿದ್ದಾರೆ
ಭೇಟಿ ವೇಳೆ ಮೋದಿ ಅವರು ಗೋರಕ್ಷಕನಾಥ ತಪಸ್ಸು ಮಾಡಿ ಜ್ವಾಲಾಪೀಠಕ್ಕೆ ಭೇಟಿ ನೀಡಲಿದ್ದು, ನಂತರ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ದರ್ಶನ ಪಡೆದು ಮಂಗಳಾರತಿ ಮಾಡಲಿದ್ದಾರೆ. ಬಳಿಕ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ, ಮಂದಿರ ವೀಕ್ಷಣೆ ನಡೆಸಿ,ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ನಮನ ಸಲ್ಲಿದ್ದಾರೆ.

ಮಠದವ ತಿಯಿಂದ ಪ್ರಧಾನಿಗೆ ಸನ್ಮಾನ
ಇನ್ನು ಇದಾದ ನಂತರ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಸೌಂದರ್ಯ ಲಹರೀ’ ಮತ್ತು ‘ಶಿವಮಹಿಮ್ನಹಃ ಸ್ತೋತ್ರಮ್’ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಮಠದ ವತಿಯಿಂದ ಪ್ರಧಾನಿ ಅವರಿಗೆ ಸನ್ಮಾನವೂ ನಡೆಯಲಿದೆ. ಬಳಿಕ ಭಕ್ತರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಬಳಿಕ ಮತ್ತೆ ಹೆಚ್ಎಎಲ್ಗೆ ತೆರಳಿ, ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
READ THIS : ಗೋಡೌನ್ಗೆ ಬೆಂಕಿ – ಕೋಟ್ಯಾಂತರ ಮೌಲ್ಯದ ಟೈಯರ್ಗಳು ಸುಟ್ಟು ಭಸ್ಮ..!!
ಪೊಲೀಸ್ ಬಿಗಿ ಬಂದೋಬಸ್ತ್
ಚುಂಚನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಭದ್ರತೆಗೆ 6 ಎಸ್ಪಿ, 8 ಎಎಸ್ಪಿ, 18 ಡಿವೈಎಸ್ಪಿ, 53 ಇನ್ಸ್ಪೆಕ್ಟರ್, 175 ಸಬ್ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಕೆಎಸ್ಆರ್ಪಿ ಮತ್ತು ಡಿಆರ್ ಪಡೆಗಳನ್ನೂ ನಿಯೋಜಿಸಲಾಗಿದೆ.

ಮಧ್ಯ ಮಾರಾಟ ನಿಷೇಧ
ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರು ಕಾರ್ಯಕ್ರಮ ಆರಂಭಕ್ಕೂ ಕನಿಷ್ಠ ಒಂದೂವರೆ ಗಂಟೆ ಮುಂಚಿತವಾಗಿ ಸ್ಥಳಕ್ಕೆ ಆಗಮಿಸಲು ಸೂಚಿಸಲಾಗಿದೆ. ಸುರಕ್ಷತಾ ಕಾರಣಗಳಿಂದಾಗಿ ಚುಂಚನಗಿರಿ ಸುತ್ತಮುತ್ತ 8 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಆದಿಚುಂಚನಗಿರಿ ಇತಿಹಾಸ
ಆದಿಚುಂಚನಗಿರಿ ಮಠ 1800 ವರ್ಷಗಳ ಇತಿಹಾಸ ಹೊಂದಿದ್ದು, ತ್ರಿವಳಿ ದಾಸೋಹ ಮೂಲಕ ಪ್ರಸಿದ್ಧಿ ಪಡೆದಿದೆ. ಚುಂಚನಗಿರಿ ಮಠದ ಅಪಾರ ಕೀರ್ತಿಗೆ ಕಾರಣರಾಗಿರುವವರೇ ಬಾಲಗಂಗಾಧರನಾಥ ಶ್ರೀಗಳು. ಇಂದು ಅದೇ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಸ್ಥಳದಲ್ಲಿ ಗುರು ಭೈರವೈಕ್ಯ ಮಂದಿರ ಸುಮಾರು 80 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದೆ.
MUST WATCH : 🔴LIVE | ಆದಿಚುಂಚನಗಿರಿ ಮಠಕ್ಕೆ ನಮೋ, ಚುಂಚನಗಿರಿಯಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ


