Dina Bhavishya : ಇಂದು ಮೇಷ ಸೇರಿ 6 ರಾಶಿಗೆ ಮಹಾದೇವನ ಆಶೀರ್ವಾದದಿಂದ ಅದ್ಭುತ ಯಶಸ್ಸು..!

Dina Bhavishya : 2026 ಮಾರ್ಚ್ 16ರ ಸೋಮವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದ್ದು, ಅನಿರೀಕ್ಷಿತವಾಗಿ ಹಣ ಲಭಿಸುವ ಅವಕಾಶವೂ ಇದೆ. ಆರೋಗ್ಯದ ಬಗ್ಗೆ ಗಮನಹರಿಸಿ ಮತ್ತು ಸರಿಯಾದ ಆಹಾರ ಸೇವಿಸಿ.
ಸಂಗಾತಿಯಿಂದ ವೃತ್ತಿಪರ ಕಾರ್ಯಗಳಲ್ಲಿ ಸಹಾಯ ಸಿಗಬಹುದು. ಕುಟುಂಬ ಜೀವನ ಸಾಮರಸ್ಯದಿಂದ ಕೂಡಿದ್ದು, ತಾಯಿಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ಅವಕಾಶ ದೊರೆಯುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಏರಿಳಿತಗಳಿಂದ ಕೂಡಿದ ದಿನವಾಗಿರಬಹುದು. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.
ಮಕ್ಕಳ ಬಗ್ಗೆ ಸ್ವಲ್ಪ ಚಿಂತೆ ಎದುರಾಗಬಹುದು. ಪ್ರೇಮ ಜೀವನದಲ್ಲಿ ಸಂಗಾತಿಯೊಂದಿಗೆ ಮಾತನಾಡುವುದರಿಂದ ಸಂತೋಷ ಸಿಗುತ್ತದೆ, ಆದರೆ ಕೆಲವು ವಿರೋಧಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕಾಗಬಹುದು.
ಮಿಥುನ ರಾಶಿ
ಇಂದು ಕೆಲವು ವಿಷಯಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದ್ದು, ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಬಂಧುಗಳ ಆರೋಗ್ಯದ ಬಗ್ಗೆ ಗಮನ ಹರಿಸುವ ಹೊಣೆ ನಿಮ್ಮ ಮೇಲೆ ಬರಬಹುದು.
ದಂಪತಿಗಳ ನಡುವೆ ಸಣ್ಣ ಕಲಹ ಉಂಟಾಗುವ ಸಾಧ್ಯತೆ ಇದೆ. ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪ ತೋರಿಸುವುದನ್ನು ತಪ್ಪಿಸುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ನೆಮ್ಮದಿ ಸಿಗುತ್ತದೆ ಮತ್ತು ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ.
ಕಟಕ ರಾಶಿ
ಇಂದು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. ವಿದೇಶದಿಂದ ಬರುವ ಸುದ್ದಿ ವ್ಯಾಪಾರ ವೃದ್ಧಿಗೆ ಸಹಕಾರಿಯಾಗಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಗಮನ ಹರಿಸುವುದು ಅಗತ್ಯ.
ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬರುತ್ತದೆ ಹಾಗೂ ಹಳೆಯ ಸಾಲಗಳನ್ನು ತೀರಿಸಲು ಅವಕಾಶ ಸಿಗಬಹುದು.
ದಂಪತಿಗಳ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ, ಆದರೆ ಪ್ರೇಮ ಜೀವನದಲ್ಲಿ ಸ್ವಲ್ಪ ಅಸೌಕರ್ಯಗಳು ಕಂಡುಬರಬಹುದು. ಜವಾಬ್ದಾರಿಗಳನ್ನು ನಿರ್ಲಕ್ಷಿಸದೇ ಕೆಲಸದ ಸ್ಥಳದಲ್ಲಿ ಎಲ್ಲರೊಂದಿಗೆ ಸ್ನೇಹಪೂರ್ವಕವಾಗಿ ವರ್ತಿಸುವುದು ಉತ್ತಮ.
ಸಿಂಹ ರಾಶಿ
ಇಂದು ಪರಾಕ್ರಮದ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಆರಂಭದಲ್ಲೇ ಪರಿಹರಿಸಲು ಪ್ರಯತ್ನಿಸುವುದು ಉತ್ತಮ. ವ್ಯಾಪಾರ ಸರಾಗವಾಗಿದ್ದರೂ ನಿರೀಕ್ಷಿತ ಲಾಭ ಕಡಿಮೆಯಾಗಬಹುದು.
ಖಾಸಗಿ ಉದ್ಯೋಗಿಗಳಿಗೆ ತಮ್ಮದಲ್ಲದ ತಪ್ಪಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕೆಲಸದ ಸ್ಥಳದಲ್ಲಿ ಪ್ರಭಾವ ಹೆಚ್ಚಾಗಿ, ಖರ್ಚುಗಳು ನಿಯಂತ್ರಣದಲ್ಲಿರುತ್ತವೆ. ದಿನವನ್ನು ಸೌಕರ್ಯ ಮತ್ತು ಐಷಾರಾಮಿಗಳೊಂದಿಗೆ ಕಳೆಯುವ ಅವಕಾಶ ದೊರೆಯಬಹುದು ಹಾಗೂ ಪ್ರಿಯ ವ್ಯಕ್ತಿಯೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಇಂದು ಅತಿಯಾದ ಆತ್ಮವಿಶ್ವಾಸದಿಂದ ಕೆಲಸಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದ್ದರೂ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ನಿಮ್ಮ ಭಾಷಣ ಹಾಗೂ ಉಪನ್ಯಾಸಗಳಿಂದ ಜನರನ್ನು ಆಕರ್ಷಿಸುವಿರಿ.
ಆಸ್ತಿ ಸಂಬಂಧಿತ ದಾಖಲೆಗಳು ಕೈ ಸೇರುವ ಸಾಧ್ಯತೆ ಇದೆ. ವಿವಿಧ ಮೂಲಗಳಿಂದ ಹಣ ಬರಬಹುದು, ಆದರೆ ಉಳಿತಾಯದ ಕಡೆ ಗಮನ ಹರಿಸುವುದು ಅಗತ್ಯ. ಕುಟುಂಬ ಸದಸ್ಯರ ಮೇಲೆ ಅಸಹಾಯಕತೆಯನ್ನು ಹೊರಹಾಕದೆ ಬಂಧುಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.
ಆದಾಯಕ್ಕೆ ತಕ್ಕಂತೆ ಜೀವನ ನಡೆಸಿ; ಇಲ್ಲವಾದರೆ ಸಾಲದ ಸಮಸ್ಯೆ ಎದುರಾಗಬಹುದು. ಪ್ರಯಾಣ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಸಾಧ್ಯ, ಆದರೆ ಹೊರಗಿನ ಆಹಾರವನ್ನು ತಪ್ಪಿಸುವುದು ಉತ್ತಮ.
ತುಲಾ ರಾಶಿ
ಇಂದು ಎದುರಾಗುವ ಸಂಕಷ್ಟಗಳು ಬೇಗನೆ ದೂರವಾಗುವ ಸಾಧ್ಯತೆ ಇದೆ ಮತ್ತು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಹೊಸ ಕೆಲಸದ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗಬಹುದು.
ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆ ಇರಲಿ ಮತ್ತು ಮುಂಗೋಪವನ್ನು ನಿಯಂತ್ರಿಸುವುದು ಉತ್ತಮ.
ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆಗಳಿಂದ ಹೆಚ್ಚುವರಿ ಖರ್ಚು ಸಂಭವಿಸಬಹುದು. ಹೂಡಿಕೆ ಮಾಡುವಾಗ ಉತ್ಸಾಹಕ್ಕಿಂತ ವಿವೇಕದಿಂದ ನಡೆದು, ಬಂಡವಾಳಕ್ಕೆ ಮಿತಿ ಇಡುವುದು ಹಾಗೂ ಇತರರ ಮೇಲೆ ಅತಿಯಾಗಿ ಅವಲಂಬಿಸದಿರುವುದು ಉತ್ತಮ.
ವೃಶ್ಚಿಕ ರಾಶಿ
ಇಂದು ಮಾಡುವ ಕೆಲಸಗಳಲ್ಲಿ ತಾಳ್ಮೆ ಅಗತ್ಯ. ಎದುರಾಳಿಗಳನ್ನು ಬುದ್ಧಿವಂತಿಕೆಯಿಂದ ಜಯಿಸುವಿರಿ. ಆದಾಯ ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಖಾಸಗಿ ಕಂಪನಿ ಏಜೆಂಟ್ಗಳಿಗೆ ಉತ್ತಮ ಕಮಿಷನ್ ದೊರೆಯುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಗೌರವ ಪಡೆಯುವಿರಿ. ಹೆಚ್ಚು ಒತ್ತಡದ ಕೆಲಸಗಳು ಆರೋಗ್ಯಕ್ಕೆ ತೊಂದರೆ ನೀಡಬಹುದು, ಮಕ್ಕಳ ಆರೋಗ್ಯದತ್ತ ಗಮನ ಹರಿಸಿ ಮತ್ತು ಹಿರಿಯರ ಸಲಹೆಯನ್ನು ಗೌರವಿಸುವುದು ಉತ್ತಮ.
ಧನು ರಾಶಿ
ಇಂದು ಅನವಶ್ಯಕ ಸಾಲಗಳಿಂದ ದೂರವಿರುವುದು ಉತ್ತಮ. ಉದ್ಯೋಗದಲ್ಲಿರುವ ನವ ದಂಪತಿಗೆ ಒಂದೇ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಗೃಹ ನಿರ್ಮಾಣದ ಕೆಲಸವನ್ನು ಸ್ವಲ್ಪ ಮುಂದೂಡುವುದು ಒಳಿತು.
ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಬಹುದು. ಸರ್ಕಾರಿ ನೌಕರರಿಗೆ ಹೆಚ್ಚುವರಿ ಆದಾಯ ಸಿಗಬಹುದು. ಮನೆಯಲ್ಲಿ ಮಂಗಳ ಕಾರ್ಯದ ತಯಾರಿ ಆರಂಭವಾಗುವ ಸಾಧ್ಯತೆ ಇದೆ.
ಆರೋಗ್ಯದ ಕಡೆ ಗಮನ ಹರಿಸಿ, ವಿಶೇಷವಾಗಿ ಉದರ ಸಂಬಂಧಿತ ತೊಂದರೆಗಳಿಗೆ ಎಚ್ಚರಿಕೆ ವಹಿಸಿ; ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಅನುಕೂಲವಾಗುತ್ತದೆ.
ಮಕರ ರಾಶಿ
ಇಂದು ಆಸ್ತಿ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವುದು ಉತ್ತಮ. ಆದಾಯ ಹೆಚ್ಚಾದರೂ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅಗತ್ಯ. ಅಧ್ಯಾಪಕರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
ಅವಿವಾಹಿತರಿಗೆ ವಿವಾಹ ಯೋಗ ಕಾಣಿಸಬಹುದು. ಮಕ್ಕಳ ನಡವಳಿಕೆಯಿಂದ ಸ್ವಲ್ಪ ಬೇಸರವಾಗಬಹುದು, ಆದ್ದರಿಂದ ತಾಳ್ಮೆಯಿಂದ ನಡೆದುಕೊಳ್ಳಿ. ಕುಟುಂಬದ ಬೇಡಿಕೆಗಳಿಂದ ಖರ್ಚು ಹೆಚ್ಚಾದರೂ ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಕಾರ್ಮಿಕರ ಸಮಸ್ಯೆಗಳನ್ನು ನೀವು ಜಾಣತನದಿಂದ ಪರಿಹರಿಸುವಿರಿ.
ಕುಂಭ ರಾಶಿ
ಇಂದು ಬಹುಕಾಲದಿಂದ ಬರಬೇಕಾಗಿದ್ದ ಹಣ ಒಟ್ಟಾಗಿ ಬರಬಹುದಾದ ಕಾರಣ ಹಣಕಾಸಿನ ಚಿಂತೆ ಕಡಿಮೆಯಾಗಬಹುದು. ವೃತ್ತಿಯಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಮನೆ ಅಥವಾ ಆಸ್ತಿ ಖರೀದಿಗೆ ಇದು ಒಳ್ಳೆಯ ಸಮಯವಾಗಬಹುದು.
ಅತಿಯಾದ ಉದ್ವೇಗವನ್ನು ತಪ್ಪಿಸಿ ಪ್ರತಿಯೊಂದು ವಿಚಾರವನ್ನೂ ಸಮಾಧಾನದಿಂದ ಆಲೋಚಿಸುವುದು ಉತ್ತಮ. ಸಹೋದ್ಯೋಗಿಗಳೊಂದಿಗೆ ಸಹಕಾರದಿಂದ ಕೆಲಸ ಮಾಡಿದರೆ ಲಾಭವಾಗುತ್ತದೆ. ಅನಾವಶ್ಯಕ ಖರ್ಚು ಹಾಗೂ ಮೋಜಿನ ತಿರುಗಾಟವನ್ನು ನಿಯಂತ್ರಿಸಿ.
ಆರೋಗ್ಯದ ಕಡೆ ಗಮನಹರಿಸಿ, ಹೆಚ್ಚು ಉಷ್ಣ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ ಹಾಗೂ ಬಂಧು-ಸ್ನೇಹಿತರೊಂದಿಗೆ ವಾಗ್ವಾದವನ್ನು ದೂರವಿಡಿ.
ಮೀನ ರಾಶಿ
ಇಂದು ಭಗವಂತನ ಆರಾಧನೆಯಿಂದ ಆತ್ಮಬಲ ಹಾಗೂ ದೈವಬಲ ಹೆಚ್ಚಿಸಿಕೊಳ್ಳುವಿರಿ. ಇತರರ ಬಗ್ಗೆ ಹೆಚ್ಚು ಚಿಂತಿಸದೆ ನಿಮ್ಮ ಗುರಿಯ ಕಡೆ ಮುಂದುವರಿಯುವುದು ಉತ್ತಮ.
ವೃತ್ತಿಯಲ್ಲಿ ಪ್ರಗತಿ ಕಾಣಿಸಿಕೊಳ್ಳಬಹುದು, ಆದರೆ ನಿಮ್ಮ ವೃತ್ತಿ ರಹಸ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ. ಸ್ನೇಹಿತರಿಂದ ಸಕಾಲಿಕ ಸಹಾಯ ದೊರೆಯಬಹುದು ಮತ್ತು ಖಾಸಗಿ ಕಂಪನಿ ನೌಕರರಿಗೆ ವೇತನ ಹೆಚ್ಚಳ ಸಾಧ್ಯತೆ ಇದೆ.
ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಬಹುದು. ಮಕ್ಕಳ ಆರೋಗ್ಯಕ್ಕಾಗಿ ಸ್ವಲ್ಪ ಹೆಚ್ಚುವರಿ ಖರ್ಚು ಆಗಬಹುದು ಹಾಗೂ ಅವಿವಾಹಿತರಿಗೆ ವಿವಾಹ ಯೋಗ ಕಾಣಿಸಬಹುದು.




