ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿದೆ.

ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ 2025 (UPSC CSE 2025) ರ ಅಂತಿಮ ಫಲಿತಾಂಶವನ್ನು ಆಯೋಗವು ಮಾರ್ಚ್ 6ರಂದು ಪ್ರಕಟಿಸಿದೆ. ಈ ಬಾರಿ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಫಸ್ಟ್ ರ್ಯಾಕ್ (AIR 1) ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ಸೈಟ್ಗಳಾದ upsc.gov.in ಅಥವಾ upsconline.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಟಾಪ್ 3 ಸಾಧಕರು
- ಅನುಜ್ ಅಗ್ನಿಹೋತ್ರಿ (Anuj Agnihotri) – 1ನೇ ರ್ಯಾಂಕ್
- ರಾಜೇಶ್ವರಿ ಸುವೆ ಎಂ (Rajeshwari Suve M) – 2ನೇ ರ್ಯಾಂಕ್ (ಮಹಿಳಾ ಟಾಪರ್)
- ಆಕಾಂಶ್ ಧುಲ್ (Akansh Dhull) – 3ನೇ ರ್ಯಾಂಕ್
ಅನುಜ್ ಅಗ್ನಿಹೋತ್ರಿಯ ಹಿನ್ನೆಲೆ
ಅನುಜ್ ಅಗ್ನಿಹೋತ್ರಿ ರಾಜಸ್ಥಾನದ ಜೋಧ್ಪುರ ಮೂಲದವರು. 2023ರಲ್ಲಿ ಜೋಧ್ಪುರದ AIIMS (All India Institute of Medical Sciences) ನಲ್ಲಿ MBBS ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಯಲ್ಲಿ (DANICS) ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಜೊತೆಗೆ ಕಠಿಣ ಪರಿಶ್ರಮ ಮಾಡಿದ ಅನುಜ್ ಅವರು ಈ ಪ್ರಶಸ್ತಿಯನ್ನು ಗಳಿಸಿದ್ದಾರೆ.

READ THIS : ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ನಲ್ಲಿ ಮಿಂಚಿದ Vijay – Trisha
ಆಯ್ಕೆಗೊಂಡ ಅಭ್ಯರ್ಥಿಗಳು
ಅಂತಿಮ ಫಲಿತಾಂಶದ ಪ್ರಕಾರ ಒಟ್ಟು 958 ಅಭ್ಯರ್ಥಿಗಳು IAS, IPS, IFS ಹಾಗೂ ಕೇಂದ್ರ ಸರ್ಕಾರದ Group A ಮತ್ತು Group B ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ 1,087 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು UPSC ಅಧಿಸೂಚನೆ ಹೊರಡಿಸಿತ್ತು.
ಪರೀಕ್ಷಾ ಪ್ರಕ್ರಿಯೆ
- ಪೂರ್ವಭಾವಿ ಪರೀಕ್ಷೆ (Prelims): 2025 ಮೇ 25
- ಮುಖ್ಯ ಪರೀಕ್ಷೆ (Mains): 2025 ಆಗಸ್ಟ್ 22–31
- ಸಂದರ್ಶನ (Personality Test): 2026 ಜನವರಿ, ನವದೆಹಲಿಯ UPSC ಕಚೇರಿಯಲ್ಲಿ; ಫೆಬ್ರವರಿ 27 ರಂದು ಮುಕ್ತಾಯ
ಸಂದರ್ಶನ ಮುಗಿದ ಒಂದು ವಾರದೊಳಗೆ UPSC ತ್ವರಿತವಾಗಿ ಅಂತಿಮ ಫಲಿತಾಂಶ ಪ್ರಕಟಿಸಿದ್ದು ಗಮನ ಸೆಳೆದಿದೆ.
ಫಲಿತಾಂಶ ಚೆಕ್ ಮಾಡುವ ವಿಧಾನ
- UPSC ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿರಿ.
- ಮುಖಪುಟದಲ್ಲಿ (Homepage) “Final Result: Civil Services Examination, 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ತೆರೆದ PDF ಫೈಲ್ನಲ್ಲಿ ನಿಮ್ಮ Roll Number ಅಥವಾ ಹೆಸರು ಟೈಪ್ ಮಾಡಿ ಫಲಿತಾಂಶ ಪರಿಶೀಲಿಸಿ.
- ಭವಿಷ್ಯ ಉಲ್ಲೇಖಕ್ಕಾಗಿ ಫಲಿತಾಂಶವನ್ನು ಡೌನ್ಲೋಡ್ ಮಾಡಬಹುದು.
ಈ UPSC CSE 2025 ಫಲಿತಾಂಶವು ದೇಶದ ಯುವಜನತೆಗೆ ಪ್ರೇರಣೆಯಾಗುತ್ತಿದೆ ಮತ್ತು ಅತೀ ಕಠಿಣ ಪರೀಕ್ಷೆಯಲ್ಲಿ ಸಾಧನೆ ಸಾಧಿಸುವುದಕ್ಕೆ ಮಾದರಿಯಾಗಿದೆ.

MUST WATCH : SURESH GOWDA ಅವ್ರು ನೋಡಲೇಬೇಕಾದ ಸುದ್ದಿ ಇದು – ಇಷ್ಟು ವರ್ಷ ಆದ್ರು ಇಲ್ಲಿನವರು ರಸ್ತೆಯನ್ನೇ ನೋಡಿಲ್ಲ




