Uttara Kannada : ಅರಣ್ಯ ಪ್ರದೇಶದಲ್ಲಿ ಮಹಿಳೆ ಶವ – ಮೃತದೇಹ ಕಂಡು ಬೆಚ್ಚಿಬಿದ್ದ ಜನರು.

Uttara Kannada ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳಗಿ ಅರಣ್ಯ ಪ್ರದೇಶದ ಬಳಿ ಅಪರಿಚಿತ ಮಹಿಳೆಯ ರುಂಡವಿಲ್ಲದ ಬೆತ್ತಲೆ ಶವ ಪತ್ತೆಯಾಗಿದ್ದು, ಶವ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕೊರಳಲಲ್ಲಿ ಲಿಂಗ ಪತ್ತೆ
ಇನ್ನು ಅರಣ್ಯಕ್ಕೆ ಕಟ್ಟಿಗೆ ತರಲು ತೆರಳಿದ್ದ ಮಹಿಳೆಯೊಬ್ಬರು ಶವವನ್ನು ಕಂಡು ಭಯಭೀತರಾಗಿ, ಕೂಡಲೇ ಓಡೋಡಿ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಎಡಗೈಯಲ್ಲಿ ತಾಮ್ರದ ಉಂಗುರ, ಹಾಗೂ ಕೊರಳಲಲ್ಲಿ ಲಿಂಗ ಪತ್ತೆಯಾಗಿದೆ.

ರುಂಡವಿಲ್ಲದ ಮಹಿಳೆಯ ಬೆತ್ತಲೆ ಶವ ಪತ್ತೆ
ವಿಷಯ ತಿಳಿದು ಮುಂಡಗೋಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರಿಗೆ ಮಹಿಳೆಯ ದೇಹವಷ್ಟೇ ಸಿಕ್ಕಿದ್ದು, ಆಕೆಯ ರುಂಡ ನಾಪತ್ತೆಯಾಗಿದೆ. ಅಷ್ಟೇ ಅಲ್ಲದೇ ಮೃತದೇಹದ ಮೇಲೆ ಯಾವುದೇ ಬಟ್ಟೆಗಳಿಲ್ಲದೇ ಬೆತ್ತಲೆ ಸ್ತಿತಿಯಲ್ಲಿ ಪತ್ತೆಯಾಗಿದೆ.
ಇದನ್ನು ಓದಿ : ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?

ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿವೈಎಸ್ಪಿ ಗೀತಾ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಸುಮಾರು ಎರಡು ದಿನಗಳ ಹಿಂದೆಯೇ ಯಾವುದೋ ಬೇರೆ ಸ್ಥಳದಲ್ಲಿ ಕೊಂದು, ಗುರುತು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ರುಂಡವನ್ನು ಬೇರ್ಪಡಿಸಿ, ದೇಹವನ್ನು ಮಾತ್ರ ಈ ನಿರ್ಜನ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯ ಹೊರಬರಬೇಕಿದೆ.
ಇದನ್ನು ನೋಡಿ : ರಾಗಿ ಖರೀದಿ ಕೇಂದ್ರದಲ್ಲಿ ವೇಬ್ರಿಡ್ಜ್ ಗೆ ಒತ್ತಾಯ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ರೈತರು




