Kitchen Recipe : ಪನೀರ್ ತಿನ್ಬೇಕು ಅನ್ನೋರಿಗೆ ಈ ಪನೀರ್ ಬುರ್ಜಿ ರೆಸಿಪಿ ತುಂಬಾ ಸೂಪರ್. ಸಾಮಾನ್ಯವಾಗಿ ಪನೀರ್ ಕರ್ರಿ, ಪನೀರ್ 65 ಅಥವಾ ಮಂಚೂರಿಯನ್ ಮಾಡ್ತಾರೆ.

Kitchen Recipe : ಪನೀರ್ ಬುರ್ಜಿ ಮಾಡಿದ್ರೆ ಚಪಾತಿ, ಅನ್ನ ಅಥವಾ ಬ್ರೆಡ್ ಜೊತೆ ಸುಲಭವಾಗಿ ತಿನ್ನಬಹುದು. ಮುಖ್ಯವಾಗಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಆಫೀಸ್ಗೆ ಗಡಿಬಿಡಿಯಲ್ಲಿ ಹೋಗುವವರಿಗೆ ಸೂಕ್ತ.
ಬೇಕಾಗುವ ಸಾಮಗ್ರಿಗಳು
- ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ)
- ಟೊಮ್ಯಾಟೋ – 1 (ಚಿಕ್ಕದಾಗಿ ಕತ್ತರಿಸಿದ)
- ಹಸಿಮೆಣಸಿನಕಾಯಿ – 1-2
- ಪನೀರ್ – ಅಗತ್ಯಕ್ಕೆ ತಕ್ಕಷ್ಟು (ತುರಿದ)
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – 1-2 ಚಮಚ
- ಅರಿಶಿಣ – ಸ್ವಲ್ಪ
ಇದನ್ನು ಓದಿ : ABD ಟಿ20 ವಿಶ್ವಕಪ್ ದಾಖಲೆ ಮುರಿದ ಕ್ವಿಂಟನ್ ಡಿ ಕಾಕ್
ಮಾಡುವ ವಿಧಾನ
1️⃣ ಮೊದಲಿಗೆ ಈರುಳ್ಳಿ, ಟೊಮ್ಯಾಟೋ ಮತ್ತು ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ.
2️⃣ ನಂತರ ಪನೀರ್ ಅನ್ನು ತುರಿದುಕೊಳ್ಳಿ.
3️⃣ ಈಗ ಕಡಾಯಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಹುರಿಯಿರಿ.
4️⃣ ಈರುಳ್ಳಿ ಬಣ್ಣ ಬದಲಾದ ಮೇಲೆ ಮೆಣಸಿನಕಾಯಿ ಸೇರಿಸಿ.
5️⃣ ಬಳಿಕ ಟೊಮ್ಯಾಟೋ ಹಾಗೂ ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
6️⃣ ಕೊನೆಗೆ ಅರಿಶಿಣ ಹಾಗೂ ತುರಿದ ಪನೀರ್ ಸೇರಿಸಿ, ಸ್ವಲ್ಪ ಹೊತ್ತು ಕಲಸಿ ಹುರಿದರೆ ಪನೀರ್ ಬುರ್ಜಿ ರೆಡಿ.
- ಗ್ರೇವಿ ಸ್ಟೈಲ್ ಬೇಕಿದ್ದರೆ 👉 ಹೆಚ್ಚು ಟೊಮ್ಯಾಟೋ ಸೇರಿಸಿ.
- ಚಪಾತಿ, ಅನ್ನ ಅಥವಾ ಬ್ರೆಡ್ ಜೊತೆ ಸರ್ವ್ ಮಾಡಿದ್ರೆ ಇನ್ನೂ ರುಚಿ.
- ಕಡಿಮೆ ಸಮಯದಲ್ಲಿ ಸಿಂಪಲ್ ಆಗಿ ಮಾಡುವ ಬ್ರೇಕ್ಫಾಸ್ಟ್ ಅಥವಾ ಡಿನ್ನರ್ ಐಡಿಯಾ.
ಇದನ್ನು ನೋಡಿ : ಸೊಣ್ಣಾಪುರದಲ್ಲಿ ಯುವಕನ ಸಾ* ಪ್ರಕರಣ ನ್ಯಾಯ ಕೊಡಿಸಿ ಅಂತ ಕುಟುಂಬದ ಕಣ್ಣೀರು

