ನನ್ನನ್ನು ನೋಡಿಕೊಳ್ಳದಿದ್ದರೆ ವಿಡಿಯೋ ಔಟ್ – ಕಮಲಾಕರ್ ಭಟ್ಗೆ ಸುಚಿತ್ರಾಳಿಂದ Honeytrap.

Uttara Kannada : ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾ ವಿರುದ್ಧ ಆಕೆಯ ಪತಿ ಮಹೇಶ್ ನಾಯ್ಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಕ್ರಮ ಸಂಬಂಧ ಬಯಲಾಗಿದಕ್ಕೆ ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸುಚಿತ್ರಾ ಕಮಲಾಕರ ಭಟ್ಗೆ Honeytrap ಮಾಡಿ ಬೆದರಿಕೆ ಹಾಕಿದ್ದಾಳೆ ಎಂದು ಸುಚಿತ್ರಾ ಪತಿ ಮಹೇಶ್ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.
ವಸಂತ್ ನಾಯ್ಕ್ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್
ಸುಚಿತ್ರಾ ಜ್ಯೋತಿಷಿ ಕಮಲಾಕರ ಭಟ್ನೊಂದಿಗೆ ಸಂಪರ್ಕಕ್ಕೆ ಬಂದ ಬಳಿಕ, ಆತನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ರಹಸ್ಯವಾಗಿ ದಾಖಲಿಸಿಕೊಂಡು ಬೆದರಿಕೆ ಹಾಕುತ್ತಿದ್ದಳು ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ. ಮೊದಲು ಭಯದಿಂದ ಮಗಳು ಈ ವಿಚಾರವನ್ನು ತಿಳಿಸಿರಲಿಲ್ಲ. ಆದರೆ ಈಗ ಸುಚಿತ್ರಾ ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ತನ್ನ ಜೊತೆ ಹೇಳಿದ್ದಾಳೆ ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ.
ಇದನ್ನು ಓದಿ : ರಾಜ್ಯಾದ್ಯಂತ ಫೆ.12 ರಂದು ‘ಬಿಸಿಯೂಟ’ ನೌಕರರ ಮುಷ್ಕರ

ನನ್ನನ್ನು ನೋಡಿಕೊಳ್ಳದಿದ್ದರೆ ವಿಡಿಯೋ ಔಟ್
ಮಕ್ಕಳ ಜತೆ ನಾನು ನಿನ್ನ ಜತೆ ಬರುತ್ತೇನೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸುತ್ತಿದ್ದಳು. ಹೀಗಾಗಿ ಮರ್ಯಾದೆಗೆ ಅಂಜಿ ಕಮಲಾಕರ್ ಭಟ್ ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಎಂದು ತಿಳಿಸಿದರು.
ಈ ವಿಚಾರವನ್ನು ನನ್ನ ಮಗಳು ಈಗ ತಿಳಿಸಿದ್ದಾಳೆ. ಮೊದಲು ಭಯದಿಂದ ಮಗಳು ಈ ವಿಚಾರವನ್ನು ತಿಳಿಸಿರಲಿಲ್ಲ. ಆದರೆ ಈಗ ಸುಚಿತ್ರಾ ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ತನ್ನ ಜೊತೆ ಹೇಳಿದ್ದಾಳೆ ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ.

ಇದನ್ನು ನೋಡಿ : ಕಾರು ಮತ್ತು ಬೈಕ್ ನಡುವೆ ಆಕ್ಸಿಡೆಂ ಬೈಕ್ ಸವಾರ ಸ್ಥಳದಲ್ಲಿಯೇ ಸಾ*




