Bengaluru : ವಿಧವೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ – ಈಗಲೇ ಅರ್ಜಿ ಸಲ್ಲಿಸಿ, 3 ಲಕ್ಷ ರೂ. ವರೆಗೆ ಹಣ ಪಡೆಯಿರಿ.

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ವಿಧವೆಯ ಮರು ವಿವಾಹವನ್ನು ಉತ್ತೇಜಿಸಲು ನೀಡುವ ಪ್ರೋತ್ಸಾಹಧನವನ್ನು ಇತ್ತೀಚೆಗೆ ಪರಿಷ್ಕರಿಸಿದೆ. ಹಿಂದಿನಂತೆ ಸರ್ಕಾರವು 2 ಲಕ್ಷ ರೂ. ನೀಡುತ್ತಿದ್ದುದನ್ನು ಇದೀಗ 3 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಈ ಯೋಜನೆಯಡಿ, SC ವರ್ಗದ ವಿಧವೆಯವರು ಮದುವೆಯಾಗುವ ಪುರುಷರಿಗೆ ಸರ್ಕಾರವು ಪ್ರೋತ್ಸಾಹಧನ ನೀಡಲಿದೆ.
ಯೋಜನೆಯ ಉದ್ದೇಶ
ಈ ಯೋಜನೆಯ ಮುಖ್ಯ ಉದ್ದೇಶವು ಪರಿಶಿಷ್ಟ ಜಾತಿ ವಿಧವೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಒದಗಿಸುವುದು, ಅವರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಮರು ವಿವಾಹದ ಮೂಲಕ ಅವರ ಜೀವನವನ್ನು ಸುಧಾರಿ ಸುವುದಾಗಿದೆ.
ಇದನ್ನು ಓದಿ : ಶಾಲೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು
ಅರ್ಹತಾ ಮಾನದಂಡಗಳು
- ಮಹಿಳೆ ಕಡ್ಡಾಯವಾಗಿ SC ವರ್ಗಕ್ಕೆ ಸೇರಿದವರಾಗಿರಬೇಕು.
- ಮಹಿಳೆಗೆ ಇದು ಮರು ವಿವಾಹವಾಗಿರಬೇಕು.
- ಪುರುಷನಿಗೆ ಇದು ಮೊದಲ ವಿವಾಹವಾಗಿರಬೇಕು.
- ವಯೋಮಿತಿ: ಮಹಿಳೆಗೆ 18 ವರ್ಷ, ಪುರುಷನಿಗೆ 21 ವರ್ಷ.
- ಮದುವೆಯಾದ 1 ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.
ಆವಶ್ಯಕ ದಾಖಲೆಗಳು
- ಜಾತಿ ಪ್ರಮಾಣಪತ್ರ
- ಮರಣ ಪ್ರಮಾಣಪತ್ರ (ಮೊದಲ ಪತಿ)
- ವಿವಾಹ ನೋಂದಣಿ ಪ್ರಮಾಣಪತ್ರ
- ದಂಪತಿಗಳ ಆಧಾರ್ ಕಾರ್ಡ್
- ಜಂಟಿ ಬ್ಯಾಂಕ್ ಖಾತೆ ವಿವರ
- ವಿವಾಹದ ಭಾವಚಿತ್ರಗಳು
ಅರ್ಜಿಯ ವಿಧಾನಗಳು
- ಆನ್ಲೈನ್: ಸೇವಾ ಸಿಂಧು ಪೋರ್ಟಲ್ ಮೂಲಕ
- ಕಚೇರಿ: ಜಿಲ್ಲಾ/ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ
ಇದನ್ನು ನೋಡಿ : TUMAKURU | ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ ಕಿಚ್ಚು ತುಮಕೂರಿನಲ್ಲಿ ಹೇಗಿತ್ತು ಆಕ್ರೋಶ




