ಇಬ್ಬರಿಗೂ ಕುಟುಂಬ, ಮಕ್ಕಳು ಇದ್ದರೂ ಪ್ರೀತಿ-ಸಂಬಂಧವು ಕೊಲೆ ಮತ್ತು Suicide ನಲ್ಲಿ ಅಂತ್ಯಗೊಂಡಿದ್ದು, ಸ್ಥಳೀಯ ಪೊಲೀಸ್ ತನಿಖೆ ಮುಂದುವರಿಸುತ್ತಿದ್ದಾರೆ.

Suicide : ಅವರಿಬ್ಬರೂ ವಿವಾಹಿತರು, ಇಬ್ಬರಿಗೂ ಸುಂದರ ಸಂಸಾರ,ಮುದ್ದಾದ ಮಕ್ಕಳಿದ್ರು..ಆದ್ರೂ ಅನೈತಿಕ ಸಂಬಂಧಕ್ಕೆ ಬಿದ್ದು, ಮಾಡಬಾರದು ಮಾಡಲು ಹೋಗಿ ಆಗಬಾರದು ಆಗಿ ಹೋಗಿದೆ.
ವಿವಾಹಿತರ ಪ್ರೇಮ ಕಹಾನಿ ಸಾವಿನಲ್ಲಿ ಅಂತ್ಯಗೊಂಡಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ರಕ್ತಸಿಕ್ಕಮಡುವಿನಲ್ಲಿ ಪ್ರಿಯತಮೆಯ ದೇಹ ಒಂದ್ಕಡೆ, ಮತ್ತೊಂದ್ಕಡೆ ನೇಣು ಬಿಗಿದ ಸ್ಥಿತಿಯಲ್ಲಿರುವ ಪ್ರಿಯಕರನ ಮೃತದೇಹ…
ಈ ದೃಶ್ಯಗಳು ಕಂಡು ಬಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನಲ್ಲಿ. ಈತನ ಹೆಸರು ಬಾಬಾ ಜಾನ್ ಅಂತಾ 46 ವರ್ಷ ವಯಸ್ಸು..
ಈಕೆಯ ಹೆಸರು ಸಲ್ಮಾ ಅಂತಾ.. 40 ವರ್ಷದ ಗೃಹಿಣಿ.. ಬಾಬಾ ಜಾನ್ ಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. .ಚೇಳೂರು ಪಟ್ಟಣದಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ..
ಇದನ್ನು ಓದಿ : Bengaluru ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ suicide..!

ಚೇಳೂರು ತಾಲುಕಿನ ಗರಿಗಿರೆಡ್ಡಿಪಾಳ್ಯದಲ್ಲಿ ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸ ಇದ್ದ ಸಲ್ಮಾಗೆ ಐದಾರು ವರ್ಷಗಳ ಹಿಂದೆ ಬಾಬಾ ಜಾನ್ ಪರಿಚಯ ಆಗಿತ್ತು. ಆ ಪರಿಚಯ ಸ್ನೇಹವಾಗಿ, ಪ್ರೀತಿ ಆಗಿತ್ತು…
ಇಬ್ಬರಿಗೂ ಕುಟುಂಬಗಳು ಇದ್ರು ಕೂಡ ಅನೈತಿಕ ಸಂಬಂಧ ಮುಂದುವರೆಸಿದ್ರು.. ಇವರಿಬ್ಬರ ನಡುವೆ ಅದೇನಾಯ್ತೋ ಗೋತ್ತಿಲ್ಲಾ,, ಪ್ರೀಯತಮೆ ಸಲ್ಲಾಳನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿ ಅಲ್ಲಿಂದ ಬಂದು ಚೇಳೂರು ಪಟ್ಟಣದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ..

ಇನ್ನೂ ವಿಚಾರ ತಿಳಿದ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು,ಪರಿಶೀಲನೆ ನಡೆಸಿದಾಗ,, ಮೇಲ್ನೋಟಕ್ಕೆ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವುದು ಕಂಡು ಬಂದಿದೆ..
ಸದ್ಯ ಮೃತ ದೇಹಗಳನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ರವಾನಿಸಿ, ಇಬ್ಬರ ಸಾವಿಗೆ ಕಾರಣವಾದ ಅಸಲಿಕಥೆಯ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ..
ಒಟ್ಟಾರೇ ಇಬ್ಬರಿಗೂ ಕಟ್ಟಿಕೊಂಡ ಗಂಡ̲ಹೆಂಡತಿ, ಮಕ್ಕಳಿದ್ರು ಮತೊಬ್ಬರ ವ್ಯಾಮೋಹಕ್ಕೆ ಬಿದ್ದು ಬೀದಿ ಹೆಣವಾಗಿದ್ರೆ ಇತ್ತ ತಾಯಿ ಆಕಡೆ ತಂದೆಯನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ…
ಇದನ್ನು ನೋಡಿ : ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ : ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಆರೆಸ್ಟ್




