Dharwad ದಲ್ಲಿ ಯುವತಿ ಝಾಕಿಯಾ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ. ಕೊಲೆ ಬಳಿಕ ಹಂತಕ ಸಾಬೀರ್, ಝಾಕಿಯಾ ಮೊಬೈಲ್ನಿಂದಲೇ ತಂದೆಗೆ “ನನ್ನನ್ನು ಹುಡುಕಬೇಡಿ” ಎಂಬ ಸಂದೇಶ ಕಳುಹಿಸಿದ್ದಾನೆ. ಸಂಪೂರ್ಣ ವಿವರ ಓದಿ

Dharwad ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದ ಯುವತಿ ಝಾಕಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ.
ಝಾಕಿಯಾಳನ್ನು ಕೊಂದ ಬಳಿಕ ಹಂತಕ ಸಾಬೀರ್, ಆಕೆಯ ಮೊಬೈಲ್ನಿಂದಲೇ ಆಕೆಯ ತಂದೆಗೆ “ಅಪ್ಪ, ನನಗೆ ಜೀವನ ಸಾಕಾಗಿದೆ. ನಾನು ಮನೆಗೆ ಬರೋದಿಲ್ಲ. ನನ್ನನ್ನು ಹುಡುಕಬೇಡಿ” ಎಂದು ಸಂದೇಶ ಕಳುಹಿಸಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯಲ್ಲಿ ತಿಳಿದು ಬಂದಂತೆ, ಝಾಕಿಯಾ ಮತ್ತು ಸಾಬೀರ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಇವರ ಪ್ರೀತಿಯ ವಿಚಾರ ಎರಡೂ ಕುಟುಂಬಗಳಿಗೆ ಗೊತ್ತಾಗಿದ್ದು, ಮದುವೆಗೆ ಸಹ ಒಪ್ಪಿಗೆ ನೀಡಲಾಗಿತ್ತು.
ಆದರೆ, ಈ ಪ್ರೀತಿಯ ಅಂತ್ಯ ಭೀಕರ ಕೊಲೆಯಲ್ಲಿ ಮುಕ್ತಾಯವಾಗಿರುವುದು ಆಘಾತ ತಂದಿದೆ.
ಕಾರಿನಲ್ಲಿ ಜಗಳ, ನಿರ್ಜನ ಪ್ರದೇಶದಲ್ಲಿ ಭೀಕರ ಹತ್ಯೆ
ಜನವರಿ 21ರಂದು, ಸಾಬೀರ್ ಪರಿಚಯಸ್ಥರ ಕಾರಿನಲ್ಲಿ ಝಾಕಿಯಾಳನ್ನು ಹೊರಗೆ ಕರೆದುಕೊಂಡು ಹೋಗಿದ್ದ. ಬಳಿಕ ಇಬ್ಬರೂ ಧಾರವಾಡ ಹೊರವಲಯದ ನಿರ್ಜನ ಪ್ರದೇಶದತ್ತ ತೆರಳಿದ್ದಾರೆ.
ಈ ವೇಳೆ ಕಾರಿನಲ್ಲೇ ಜಗಳ ಉಂಟಾಗಿ, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಕೊನೆಗೆ ಕೋಪದ ಆವೇಶದಲ್ಲಿ ಸಾಬೀರ್, ಝಾಕಿಯಾಳನ್ನು ಆಕೆಯ ವೇಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಮೊಬೈಲ್ನಿಂದಲೇ ಕುಟುಂಬಕ್ಕೆ ಮೆಸೇಜ್
ಹತ್ಯೆಯ ನಂತರ ಸಾಬೀರ್, ಝಾಕಿಯಾಳ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು, ಅಲ್ಲಿಯೇ ಆಕೆಯ ಮೊಬೈಲ್ನಿಂದ ಕುಟುಂಬಕ್ಕೆ ಮೆಸೇಜ್ ಕಳುಹಿಸಿದ್ದಾನೆ.
ನಂತರ ಮೊಬೈಲ್ನ್ನು ಸ್ವಿಚ್ ಆಫ್ ಮಾಡಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಮಾರನೇ ದಿನ ಶವ ಪತ್ತೆಯಾದಾಗ, ಸಾಬೀರ್ ತನಗೇನೂ ಗೊತ್ತಿಲ್ಲ ಎಂಬಂತೆ ಅದೇ ಸ್ಥಳಕ್ಕೆ ಬಂದು ನಿಂತಿದ್ದಾನೆ. ಆದರೆ, ಆತ ತನ್ನ ಮೊಬೈಲ್ನಲ್ಲಿದ್ದ ಝಾಕಿಯಾಳ ಫೋಟೋಗಳು, ಕಾಲ್ ಹಿಸ್ಟರಿ, ವಾಟ್ಸಪ್ ಚಾಟ್ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದನು.
ಇದೇ ಅಂಶ ಪೊಲೀಸರಲ್ಲಿ ಅನುಮಾನ ಹುಟ್ಟಿಸಿದೆ.
ಧಾರವಾಡ ಪೊಲೀಸರು ಸಾಬೀರ್ನ್ನು ವಶಕ್ಕೆ ಪಡೆದು ಕಠಿಣ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾನೆ.
ಪ್ರಸ್ತುತ ಆರೋಪಿ ಸಾಬೀರ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಸ್ಥಳ ಮಹಜರು ಪ್ರಕ್ರಿಯೆಯನ್ನೂ ಪೊಲೀಸರು ಪೂರ್ಣಗೊಳಿಸಿದ್ದಾರೆ.




