ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ Mark Movie ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಲೇ ಇದೆ.

Mark ಬಿಡುಗಡೆಗೊಂಡು ಕೇವಲ ಎರಡು ವಾರಗಳಲ್ಲೇ ಈ ಸಿನಿಮಾ 50 ಕೋಟಿ ರೂ. ಗಡಿ ದಾಟಿ ಭರ್ಜರಿ ಯಶಸ್ಸು ದಾಖಲಿಸಿದೆ.
ಡಿಸೆಂಬರ್ ತಿಂಗಳ ಬಾಕ್ಸ್ ಆಫೀಸ್ ವಿನ್ನರ್ ಯಾರು ಎಂಬ ಚರ್ಚೆ ಸ್ಯಾಂಡಲ್ವುಡ್ನಲ್ಲಿ ಜೋರಾಗಿದೆ. ಇದೇ ನಡುವೆಯೇ, ಮಾರ್ಕ್ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಮೊದಲ ಎರಡು ವಾರಗಳ ಗಳಿಕೆ ಬಗ್ಗೆ ಚಿತ್ರತಂಡದ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.
2 ವಾರಕ್ಕೆ 51.30 ಕೋಟಿ ರೂ. ಕಲೆಕ್ಷನ್
ಮಾರ್ಕ್ ಸಿನಿಮಾ ದಾಖಲೆ ಗಳಿಕೆ ಚಿತ್ರತಂಡದ ಮೂಲಗಳ ಪ್ರಕಾರ, ಮಾರ್ಕ್ ಸಿನಿಮಾ ಎರಡು ವಾರಗಳಲ್ಲಿ ಸುಮಾರು 51.30 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ 50 ಕೋಟಿ ರೂ. ಕ್ಲಬ್ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
‘ಮ್ಯಾಕ್ಸ್’ ನಂತರ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರ ಕಾಂಬಿನೇಷನ್ ಮತ್ತೊಮ್ಮೆ ಕೆಲಸ ಮಾಡಿದೆ ಎನ್ನಬಹುದು.
ಈ ಸಿನಿಮಾವನ್ನು ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಈ ನಿರ್ಮಾಣ ಸಂಸ್ಥೆ ಅದ್ಧೂರಿಯಾಗಿ ಕಮ್ಬ್ಯಾಕ್ ಮಾಡಿದೆ. ನಿರ್ಮಾಣ ಮೌಲ್ಯ, ತಂತ್ರಜ್ಞಾನ ಮತ್ತು ಕಥನ ಶೈಲಿ ಪ್ರೇಕ್ಷಕರನ್ನು ಸೆಳೆದಿದೆ.
ಮಾರ್ಕ್ ಸಿನಿಮಾ ಈಗಾಗಲೇ ಮೂರನೇ ವಾರಕ್ಕೆ ಕಾಲಿಟ್ಟರೂ ಕೂಡ ಅದರ ಪ್ರದರ್ಶನದ ವೇಗ ಕಡಿಮೆಯಾಗಿಲ್ಲ. ಬೆಂಗಳೂರು ನಗರದಲ್ಲೇ 250ಕ್ಕೂ ಹೆಚ್ಚು ಶೋಗಳು ಇನ್ನೂ ಮುಂದುವರಿದಿವೆ.ಮಾಸ್ ಪ್ರೇಕ್ಷಕರ ಜೊತೆಗೆ ಫ್ಯಾಮಿಲಿ ಆಡಿಯನ್ಸ್ನಲ್ಲೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಪಕ್ಕಾ ಮನರಂಜನೆ ಪ್ಯಾಕೇಜ್
ಮಾರ್ಕ್ ಸಿನಿಮಾದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳು , ಭಾವನಾತ್ಮಕ ಎಳೆ ,ಪಕ್ಕಾ ಕಮರ್ಶಿಯಲ್ ಮನರಂಜನೆ ಇವೆಲ್ಲ ಕಾರಣಗಳಿಂದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಟ್ಟಿಯಾಗಿ ನಿಂತಿದೆ.
ನಟ-ನಟಿಯರ ಪಟ್ಟಿ
ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ
- ರೋಶಿಣಿ ಪ್ರಕಾಶ್
- ಅರ್ಚನಾ ಕೊಟ್ಟಿಗೆ
- ನವೀನ್ ಚಂದ್ರ
- ಪ್ರತಾಪ್ ನಾರಾಯಣ್
- ರಘು ರಾಮನಕೊಪ್ಪ
- ಗೋಪಾಲ್ ಕೃಷ್ಣ ದೇಶಪಾಂಡೆ
- ವಿಕ್ರಾಂತ್
- ಗುರು ಸೋಮಸುಂದರಂ
- ದೀಪ್ಶಿಕಾ
- ಯೋಗಿ ಬಾಬು
ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.ಅದ್ಧೂರಿ ನಿರ್ಮಾಣ, ದೃಶ್ಯ ವೈಭವ ಮತ್ತು ಸಂಗೀತ ಸಿನಿಮಾಕ್ಕೆ ಮತ್ತಷ್ಟು ಬಲ ತುಂಬಿದೆ.




