Kitchen Recipe : ಹೋಟೆಲ್ ಸ್ಟೈಲ್ ರುಚಿಯ ಬಟರ್ ಮಶ್ರೂಮ್ ಮಸಾಲಾನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ರೋಟಿ, ನಾನ್, ಕುಲ್ಚಾ ಅಥವಾ ಜೀರಿಗೆ ರೈಸ್ ಜೊತೆ ಈ ಕರಿಯ ರುಚಿ ಅದ್ಭುತವಾಗಿರುತ್ತದೆ.

Kitchen Recipe : ಬೇಕಾಗುವ ಪದಾರ್ಥಗಳು
- ಮಶ್ರೂಮ್ – 300 ಗ್ರಾಂ
- ಖಾರದ ಪುಡಿ – 1 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಅರಿಶಿಣ ಪುಡಿ – ಸ್ವಲ್ಪ
- ದನಿಯಾ ಪುಡಿ – 1 ಚಮಚ
- ಗರಂ ಮಸಾಲಾ – ½ ಚಮಚ
- ಬೆಣ್ಣೆ – 2 ಚಮಚ
- ಜೀರಿಗೆ – ¼ ಚಮಚ
- ಮರಾಠಿ ಮೊಗ್ಗು – 2
- ಚಕ್ಕೆ – ಸ್ವಲ್ಪ
- ಏಲಕ್ಕಿ – 2
- ಲವಂಗದ ಎಲೆ (ಪಲಾವ್ ಎಲೆ) – 3–4
- ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ)
- ಬಟಾಣಿ – 1 ಬಟ್ಟಲು
- ಟೊಮೆಟೋ – 1
- ಗೋಡಂಬಿ – ಸ್ವಲ್ಪ
- ಟೊಮೆಟೋ ಪೇಸ್ಟ್ – 1 ಬಟ್ಟಲು
- ಮೊಸರು – ½ ಬಟ್ಟಲು
- ಮೆಣಸಿನ ಪುಡಿ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
1: ಮಶ್ರೂಮ್ ತಯಾರಿ
ಮೊದಲು ಮಶ್ರೂಮ್ಗಳನ್ನು ಚೆನ್ನಾಗಿ ತೊಳೆದು ಬೇಕಾದ ಆಕಾರಕ್ಕೆ ಕತ್ತರಿಸಿ. ಇದಕ್ಕೆ ಅರಿಶಿಣ ಪುಡಿ, ದನಿಯಾ ಪುಡಿ ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2: ಮಶ್ರೂಮ್ ಫ್ರೈ
ಒಲೆಯ ಮೇಲೆ ಬಾಣಲೆ ಇಟ್ಟು 1 ಚಮಚ ಬೆಣ್ಣೆ ಹಾಕಿ. ಬೆಣ್ಣೆ ಕಾದ ನಂತರ ಮಸಾಲೆ ಮಿಶ್ರಿತ ಮಶ್ರೂಮ್ಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ ಬದಿಗೆ ಇಡಿ.
3: ಟೊಮೆಟೋ-ಗೋಡಂಬಿ ಪೇಸ್ಟ್
ಮಿಕ್ಸಿ ಜಾರ್ಗೆ ಟೊಮೆಟೋ ಮತ್ತು ಗೋಡಂಬಿ ಹಾಕಿ ಮೃದುವಾಗಿ ಪೇಸ್ಟ್ ಮಾಡಿ.
4: ಮಸಾಲೆ ತಯಾರಿ
ಇನ್ನೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಉಳಿದ 1 ಚಮಚ ಬೆಣ್ಣೆ ಹಾಕಿ.
ಅದಕ್ಕೆ ಜೀರಿಗೆ, ಮರಾಠಿ ಮೊಗ್ಗು, ಚಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ. ಸುಗಂಧ ಬರಲು ಬಿಡಿ.
ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
5: ಕರಿಯ ಅಂತಿಮ ಹಂತ
ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಟೊಮೆಟೋ, ಬಟಾಣಿ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
ಟೊಮೆಟೋ ಮೆತ್ತಗಾದ ಬಳಿಕ ಖಾರದ ಪುಡಿ, ದನಿಯಾ ಪುಡಿ ಮತ್ತು ಗರಂ ಮಸಾಲಾ ಹಾಕಿ.
ನಂತರ ಮೊಸರು, ಟೊಮೆಟೋ-ಗೋಡಂಬಿ ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ.
6: ಮಶ್ರೂಮ್ ಸೇರಿಸಿ
ಮಸಾಲೆ ಗಟ್ಟಿಯಾಗುತ್ತಿದ್ದಂತೆ ಫ್ರೈ ಮಾಡಿದ ಮಶ್ರೂಮ್ ಸೇರಿಸಿ 5 ನಿಮಿಷ ಕುದಿಸಿ.
ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
ಸವಿಯಲು ಸಿದ್ಧ
ಈಗ ರುಚಿಕರವಾದ ಬಟರ್ ಮಶ್ರೂಮ್ ಮಸಾಲಾ ಸಿದ್ಧವಾಗಿದೆ.
ರೋಟಿ, ನಾನ್, ಪ್ಲೇನ್ ಪರೋಟಾ ಅಥವಾ ಜೀರಿಗೆ ರೈಸ್ ಜೊತೆಗೆ ಸವಿಯಿರಿ.




