Dina Bhavishaya : 2026 ಜನವರಿ 8ರ ವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishaya : ಇಂದು ಚಂದ್ರನು ಧನು ರಾಶಿಯಲ್ಲಿ ಸ್ಥಾಪಿತನಾಗಿ ಸೂರ್ಯನೊಂದಿಗೆ ಕೇಂದ್ರ ಯೋಗವನ್ನು ರೂಪಿಸುತ್ತಾನೆ.ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಇಂದು ಆತ್ಮವಿಶ್ವಾಸ ಹೆಚ್ಚಾಗಿದ್ದು, ಕೆಲಸದ ಜವಾಬ್ದಾರಿಗಳು ಹೆಚ್ಚುವ ಸಾಧ್ಯತೆ ಇದೆ. ಕೆಲವು ಅಪಾಯಗಳು ಎದುರಾದರೂ ಪ್ರಗತಿ ಮತ್ತು ಯಶಸ್ಸಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ.
ಹಣಕಾಸಿನ ಸ್ಥಿತಿ ಬಲವಾಗಿದ್ದು, ಅನೇಕ ಆದಾಯ ಮೂಲಗಳಿಂದ ಲಾಭ ಸಿಗಲಿದೆ; ಆದರೆ ಸಹೋದರರ ನಡುವೆ ಹಣಕಾಸಿನ ವಿಚಾರದಲ್ಲಿ ಚಿಂತೆ ಉಂಟಾಗಬಹುದು. ಭೂಮಿ ಅಥವಾ ವಾಹನ ಖರೀದಿಯ ಸಾಧ್ಯತೆ ಇದ್ದು, ಕುಟುಂಬದೊಂದಿಗೆ ಸಮಯ ಕಳೆಯುವುದು ಒಳಿತು.
ವೃಷಭ ರಾಶಿ
ಇಂದು ನಿಮ್ಮ ಪರಿಶ್ರಮದ ಫಲ ದೊರೆಯುವ ಸಾಧ್ಯತೆ ಇದೆ, ಆದರೆ ಕೆಲವು ಘಟನೆಗಳು ಮನಸ್ಸಿಗೆ ಅಶಾಂತಿ ಉಂಟುಮಾಡಬಹುದು. ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯದೆ ಮುಂದುವರಿಯಿರಿ.
ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗಲಿದೆ. ಜೀವನದಲ್ಲಿ ರೋಚಕ ತಿರುವುಗಳಿದ್ದರೂ ಹಣಕಾಸಿನ ಒತ್ತಡ ಎದುರಾಗಬಹುದು, ಆದ್ದರಿಂದ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ.
ಮಿಥುನ ರಾಶಿ
ಇಂದು ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯುತ್ತದೆ.
ದಾಂಪತ್ಯ ಜೀವನ ಸುಖಮಯವಾಗಿದ್ದು, ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಹಣಕಾಸಿನ ನಿರ್ಧಾರಗಳನ್ನು ವಿವೇಕದಿಂದ ತೆಗೆದುಕೊಳ್ಳಿ;
ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮಾತಿನ ಕೌಶಲ್ಯ ಹೆಚ್ಚಾಗಿ ಎಲ್ಲರ ಮೆಚ್ಚುಗೆ ಪಡೆಯುತ್ತೀರಿ, ವಿದ್ಯಾರ್ಥಿಗಳಿಗೆ ಸಹ ಶುಭ ಸುದ್ದಿ ಸಿಗಬಹುದು
ಕಟಕ ರಾಶಿ
ಇಂದು ಹಳೆಯ ವ್ಯಾಜ್ಯಗಳಿಂದ ಮನಸ್ಸಿಗೆ ಒತ್ತಡ ಉಂಟಾಗಬಹುದು, ಆದ್ದರಿಂದ ಶಾಂತವಾಗಿ ಮೌನವನ್ನು ಪಾಲಿಸುವುದು ಉತ್ತಮ. ಕುಟುಂಬದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ, ಆಧ್ಯಾತ್ಮದತ್ತ ಆಸಕ್ತಿ ಹೆಚ್ಚಿಸಿಕೊಳ್ಳಿ.
ಮನೆ ನಿರ್ವಹಣೆಗೆ ಖರ್ಚು ಇರಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಬೆಂಬಲ ದೊರೆಯುತ್ತಿದ್ದು, ಉದ್ಯೋಗಸ್ಥರಿಗೆ ಹೊಸ ಉದ್ಯೋಗದ ಅವಕಾಶವೂ ಬರಬಹುದು.
ಜೀವನ ಸಂಗಾತಿಯ ಸಹಕಾರದಿಂದ ಶೈಕ್ಷಣಿಕ ಹಾಗೂ ಸಾಂಸಾರಿಕವಾಗಿ ಉತ್ತಮ ಫಲಿತಾಂಶಗಳು ದೊರೆಯಲಿವೆ.
ಸಿಂಹ ರಾಶಿ
ಇಂದು ಸಿಂಹ ರಾಶಿಗೆ ಅತ್ಯಂತ ಶುಭ ದಿನವಾಗಿದ್ದು, ಶತ್ರುಗಳ ಮೇಲೆ ಜಯ ಮತ್ತು ಕೆಲಸದ ಅಡೆತಡೆಗಳ ನಿವಾರಣೆ ಸಾಧ್ಯ. ಗುರಿಯತ್ತ ಮುನ್ನುಗ್ಗಿದರೆ ಖಂಡಿತ ಯಶಸ್ಸು ದೊರೆಯುತ್ತದೆ.
ಪತ್ನಿಯ ಸಲಹೆಗಳನ್ನು ಅನುಸರಿಸುವುದು ಒಳಿತಾಗಲಿದೆ. ಬಾಕಿ ಹಣ ವಾಪಸ್ ಬಂದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವೃತ್ತಿಪರ ಯಶಸ್ಸಿನ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಗಮನ ನೀಡಿ; ವ್ಯಾಯಾಮ ಅಥವಾ ಧ್ಯಾನದಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಇಂದು ಭಗವಂತನ ಅನುಗ್ರಹದಿಂದ ಭಯವಿಲ್ಲದೆ ಮುನ್ನಡೆಯುವ ದಿನವಾಗಿದ್ದು, ಸಾಮಾಜಿಕ ಪ್ರತಿಷ್ಠೆ ಮತ್ತು ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ಸಿಗಲಿವೆ. ಆರ್ಥಿಕ ಸ್ಥಿತಿ ಸುಧಾರಿಸಿ ಆದಾಯ ಹೆಚ್ಚಾಗುವ ಸಾಧ್ಯತೆ ಇದ್ದರೂ ಸ್ವಲ್ಪ ಹತಾಶೆ ಕಾಣಬಹುದು.
ಕೆಲಸದ ಸ್ಥಳದಲ್ಲಿ ವಾದವಿವಾದ ತಪ್ಪಿಸಿ, ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ದಾಂಪತ್ಯ ಜೀವನ ಸುಖಮಯವಾಗಿದ್ದು, ಸಂಗಾತಿ ಮತ್ತು ಕುಟುಂಬದ ಬೆಂಬಲ ದೊರೆಯಲಿದೆ.
ತುಲಾ ರಾಶಿ
ಇಂದು ಮಾತಿನಲ್ಲಿ ಸೌಮ್ಯತೆ ಮತ್ತು ಪ್ರಭಾವ ಇರುತ್ತದೆ, ಆದರೆ ಎಲ್ಲರೂ ನಿಮ್ಮಂತೆ ಯೋಚಿಸುವುದಿಲ್ಲ ಎಂಬುದನ್ನು ಮನದಲ್ಲಿಡಿ. ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಪೋಷಕರ ಆರೋಗ್ಯದ ಕಡೆ ಗಮನ ಅಗತ್ಯ.
ಉದ್ಯೋಗ ಹಾಗೂ ವ್ಯಾಪಾರಕ್ಕೆ ಅನುಕೂಲಕರ ದಿನವಾಗಿದ್ದು, ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಸಿಗುತ್ತದೆ. ಮಾನಸಿಕ ನೆಮ್ಮದಿ ಇದ್ದರೂ ಭಾವನೆಗಳು ಏರುಪೇರಾಗುವ ಸಾಧ್ಯತೆ ಇರುವುದರಿಂದ ಆತುರದ ನಿರ್ಧಾರಗಳನ್ನು ತಪ್ಪಿಸಿ, ತಾಳ್ಮೆ ವಹಿಸಿ; ಸಂಜೆಯ ವೇಳೆಗೆ ಪರಿಸ್ಥಿತಿ ಸುಧಾರಿಸುತ್ತದೆ.
ವೃಶ್ಚಿಕ ರಾಶಿ
ಇಂದು ಕುಟುಂಬದಲ್ಲಿ ಸಂತಸದ ವಾತಾವರಣವಿದ್ದು, ಉದ್ಯೋಗ ಮತ್ತು ವ್ಯಾಪಾರಕ್ಕೆ ಅನುಕೂಲಕರ ದಿನವಾಗಿದೆ. ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಿ, ಪಿತ್ರಾರ್ಜಿತ ಆಸ್ತಿ ಹಾಗೂ ಸಂಪತ್ತಿನ ಹೆಚ್ಚಳ ಸಾಧ್ಯತೆ ಇದೆ.
ಮನಸ್ಸಿನಲ್ಲಿ ಅಜ್ಞಾತ ಭಯದಿಂದ ಸ್ವಲ್ಪ ಗೊಂದಲ ಇದ್ದರೂ ಆರೋಗ್ಯ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಧಾರಿಸಲಿದೆ; ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ಸಿಗುತ್ತದೆ. ಗಣೇಶನಿಗೆ ಲಡ್ಡುಗಳನ್ನು ಅರ್ಪಿಸುವುದು ಶುಭಕರ.
ಧನುಸ್ಸು ರಾಶಿ
ಇಂದು ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ಸು ಪಡೆಯುತ್ತೀರಿ; ಆದಾಯ ಹೆಚ್ಚಳಕ್ಕೂ ಹೊಸ ಅವಕಾಶಗಳು ಕಾಣುತ್ತವೆ.
ಉದ್ಯೋಗ ಬದಲಾವಣೆಯ ಸೂಚನೆಗಳಿದ್ದು, ವೃತ್ತಿಯಲ್ಲಿ ಸಣ್ಣ ಅಡೆತಡೆಗಳು ಇರಬಹುದು. ಭಾವನೆಗಳನ್ನು ನಿಯಂತ್ರಿಸಿ, ದಿಢೀರ್ ನಿರ್ಧಾರಗಳನ್ನು ತಪ್ಪಿಸಿ. ತಾಯಿಯ ಆರೋಗ್ಯ ಸುಧಾರಿಸಲಿದೆ. ಶನಿ ಮಹಾತ್ಮನಿಗೆ ಎಳ್ಳೆಣ್ಣೆ ದಾನ ಮಾಡಿ, ಬಡವರಿಗೆ ಆಹಾರ ನೀಡುವುದು ಶುಭಕರ.
ಮಕರ ರಾಶಿ
ಇಂದು ಹತ್ತಿರದವರಿಂದ ಅನಗತ್ಯ ಜಗಳಗಳು ಸಂಭವಿಸಬಹುದಾದರೂ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಪ್ರಗತಿ ಅವಕಾಶಗಳು ಕಾಣುತ್ತವೆ.
ಆದಾಯದ ಹೊಸ ಮೂಲಗಳು ಸೃಷ್ಟಿಯಾದರೂ ಅತಿಯಾದ ಖರ್ಚಿನಿಂದ ಜಾಗ್ರತೆ ಅಗತ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಸಣ್ಣ ಅಡೆತಡೆಗಳಿದ್ದರೂ ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯ ಹಾಗೂ ದಾಂಪತ್ಯ ಜೀವನ ಸಂತೋಷಕರವಾಗಿರುತ್ತದೆ.
ಕುಂಭ ರಾಶಿ
ಇಂದು ಆತ್ಮವಿಶ್ವಾಸ ಹೆಚ್ಚಾಗಿ, ಶ್ರೀ ದುರ್ಗಾಮಾತೆಯ ಕೃಪೆಯಿಂದ ಮನೋಕಾಮನೆಗಳು ಈಡೇರಲು ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆ ಮತ್ತು ಹೊಸ ಜವಾಬ್ದಾರಿಗಳಿಂದ ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗುತ್ತವೆ.
ವೈವಾಹಿಕ ಜೀವನ ಸಂತೋಷಕರವಾಗಿದ್ದು, ಹೊಸ ಆದಾಯ ಮೂಲಗಳು ಮತ್ತು ವ್ಯಾಪಾರ ಲಾಭಗಳು ದೊರೆಯಲಿವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡುವುದು ಒಳಿತು.
ಮೀನ ರಾಶಿ
ಇಂದು ಕುಟುಂಬ ಹಾಗೂ ಮೇಲಾಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಮತ್ತು ಉದ್ಯೋಗದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳು ಸಿಗಲಿವೆ. ಆರ್ಥಿಕ ಸ್ಥಿತಿ ಸುಧಾರಿಸಿ ಹಣದ ಹರಿವಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.
ಆದರೆ ಭಾವನೆಗಳಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಆತುರದ ನಿರ್ಧಾರಗಳನ್ನು ತಪ್ಪಿಸಿ. ಮಾಡದೇ ಇರುವ ತಪ್ಪಿಗೆ ಮೂದಲನೆ ಎದುರಾದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ದೈವ ಪ್ರಾರ್ಥನೆ ಮಾಡಿ ಶಾಂತವಾಗಿರಿ.




