Kitchen Tips : ಹೋಟೆಲ್ ಅಥವಾ ರೆಸ್ಟೋರೆಂಟ್ಗೆ ಹೋದಾಗ ರೋಟಿ, ಚಪಾತಿಯ ಜೊತೆಗೆ ರುಚಿಕರವಾದ ಪನ್ನೀರ್ ಕರಿಗಳು ಎಲ್ಲರಿಗೂ ಇಷ್ಟ.

Kitchen Tips : ಅವುಗಳಲ್ಲಿ ಮೇಥಿ ಪನ್ನೀರ್ ಕರಿ (Methi Paneer Curry) ವಿಶೇಷ ಸ್ಥಾನ ಹೊಂದಿದೆ. ಇಂದು ನಾವು ಹೋಟೆಲ್ ಶೈಲಿಯಲ್ಲಿ ಮೇಥಿ ಪನ್ನೀರ್ ಕರಿ ಮಾಡುವ ಸರಳ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಮನೆಯಲ್ಲೇ ಒಂದ್ಸಲ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು (Ingredients)
- ಪನ್ನೀರ್ – 200 ಗ್ರಾಂ
- ಚಕ್ಕೆ – ಸ್ವಲ್ಪ
- ಲವಂಗ – ಸ್ವಲ್ಪ
- ಕಾಳು ಮೆಣಸು – ¼ ಚಮಚ
- ಶುಂಠಿ–ಬೆಳ್ಳುಳ್ಳಿ – ಸ್ವಲ್ಪ
- ಹಸಿಮೆಣಸಿನ ಕಾಯಿ – 9–10
- ಈರುಳ್ಳಿ – 1
- ಗೋಡಂಬಿ – ಅರ್ಧ ಹಿಡಿ
- ಜೀರಿಗೆ – ಸ್ವಲ್ಪ
- ಮೆಂತ್ಯೆ ಸೊಪ್ಪು – 1 ಕಪ್
- ಬೇಯಿಸಿದ ಬಟಾಣಿ – 1 ಕಪ್
- ಗರಂ ಮಸಾಲಾ ಪುಡಿ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಎಣ್ಣೆ – ಅಗತ್ಯವಷ್ಟು
ಇದನ್ನು ಓದಿ : Silicon City ಯಲ್ಲಿ ಘೋರ ದುರಂತ – ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ
ಮಾಡುವ ವಿಧಾನ (Preparation Method)
1:
ಮೊದಲು ಒಲೆಯ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ–ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಈರುಳ್ಳಿ ಹಾಗೂ ಗೋಡಂಬಿಯನ್ನು ಹಾಕಿ ಚೆನ್ನಾಗಿ ಕೆಂಪಾಗುವವರೆಗೆ ಹುರಿಯಿರಿ.
2:
ಇದನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
3:
ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆ ಮತ್ತು ಮೆಂತ್ಯೆ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
4:
ಈಗ ಇದಕ್ಕೆ ಬೇಯಿಸಿದ ಬಟಾಣಿ, ರುಬ್ಬಿದ ಮಸಾಲೆ ಹಾಗೂ ಕ್ಯೂಬ್ ಮಾಡಿದ ಪನ್ನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
5:
ಅಗತ್ಯವಿದ್ದಷ್ಟು ನೀರು, ಉಪ್ಪು ಹಾಗೂ ಗರಂ ಮಸಾಲಾ ಪುಡಿ ಸೇರಿಸಿ 5–10 ನಿಮಿಷ ನಿಧಾನವಾಗಿ ಕುದಿಯಲು ಬಿಡಿ.
6:
ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸರ್ವ್ ಮಾಡುವ ವಿಧಾನ
ಬಿಸಿ ಬಿಸಿ ಮೇಥಿ ಪನ್ನೀರ್ ಕರಿಯನ್ನು ರೋಟಿ, ಚಪಾತಿ, ನಾನ್ ಅಥವಾ ಜೀರಾ ರೈಸ್ ಜೊತೆ ಸರ್ವ್ ಮಾಡಿ.
ಇದನ್ನು ನೋಡಿ : ಖರ್ಚಿಗೆ ಅಮ್ಮ ಹಣ ಕೊಡಲಿಲ್ಲ ಅಂತ ಬೆಂಕಿ ಹಚ್ಚಿಕೊಂಡ ಮಗ..!




