Hoskote ಯಲ್ಲಿ ನಿಧಿಗಾಗಿ ದತ್ತು ಮಗುವಿಗೆ ಬಲಿ ಪೂಜೆ ಆರೋಪ, ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಅಧಿಕಾರಿಗಳ ದಾಳಿ .

Hoskote : ನಿಧಿಗಾಗಿ (Treasure) ದತ್ತು ಪಡೆದ ಮಗುವನ್ನು ಬಲಿ ಪೂಜೆಗೆ ಬಳಸಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಹೊಸಕೋಟೆ ತಾಲೂಕಿನ ಸೂಲಿಬೆಲೆ ಜನತಾ ಕಾಲೊನಿಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಸೂಲಿಬೆಲೆಯ ಜನತಾ ಕಾಲೊನಿಯಲ್ಲಿರುವ ಸೈಯದ್ ಇಮ್ರಾನ್ ಎಂಬವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಪದ ಪ್ರಕಾರ, ಇವರು ಎಂಟು ತಿಂಗಳ ಹಿಂದೆ ಬೇರೆಯವರಿಂದ ಗಂಡು ಮಗುವನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 4 ಜನವರಿ 2026
ಮಕ್ಕಳ ಸಹಾಯವಾಣಿಗೆ ಅಪರಿಚಿತರಿಂದ ಕರೆ
ಜನವರಿ 3ರಂದು ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡುತ್ತಿದ್ದಾರೆ ಎಂಬ ಮಾಹಿತಿ ಅಪರಿಚಿತ ವ್ಯಕ್ತಿಯಿಂದ ಮಕ್ಕಳ ಸಹಾಯವಾಣಿ (Child Helpline)ಗೆ ಕರೆ ಮೂಲಕ ಬಂದಿದೆ.
ಈ ಮಾಹಿತಿ ಆಧರಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ (DCPU) ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಕ್ಷಣ ದಾಳಿ ನಡೆಸಿದ್ದಾರೆ.
ಮನೆಗೆ ದಾಳಿ ನಡೆಸಿದ ವೇಳೆ,ಮನೆಯೊಳಗಿನ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ.ಈ ದೃಶ್ಯಗಳು ಬಲಿ ಪೂಜೆ ನಡೆದಿರುವ ಶಂಕೆಯನ್ನು ಮತ್ತಷ್ಟು ಬಲಪಡಿಸಿವೆ.
ಎಂಟು ತಿಂಗಳ ಮಗು ರಕ್ಷಣೆ
ದಾಳಿಯ ವೇಳೆ ಎಂಟು ತಿಂಗಳ ಗಂಡು ಮಗುವನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ.ನಂತರ ಮಗುವನ್ನು ಶಿಶು ಕೇಂದ್ರಕ್ಕೆ (Child Care Institution) ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಮತ್ತು ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ನೋಡಿ : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಹದಿಹರೆಯದ ಬಾಲಕರು




