Bengaluru | ಮಹಡಿಯಿಂದ ಬಿದ್ದು ಯುವಕ ಸಾವು.

Bengaluru ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಔಷಧ ತಯಾರಿಕಾ ಕಂಪನಿಯ ಕಟ್ಟಡದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನೆನ್ನೆ ನಡೆದಿದೆ.
ಇದನ್ನು ಓದಿ : ದೇವರಾಯನದುರ್ಗ, ನಾಮದ ಚಿಲುಮೆ, ಮಂದಾರಗಿರಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ
ಮಹಡಿಯಿಂದ ಬಿದ್ದು ದಾರುಣ ಸಾವು
ಮೃತ ಯುವಕನನ್ನು ಅನಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಕಂಪನಿಯ ಕಟ್ಟಡದ 6ನೇ ಮಹಡಿಯ ಬಾಲ್ಕನಿಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಾ ಕುಳಿತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾಲ್ಕನಿ ಬಳಿ ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೊಲೀಸರು ಭೇಟಿ , ಪರಿಶೀಲನೆ
ಇನ್ನು ಘಟನಾ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಯುವಕ ಮತ್ತು ಸ್ನೇಹಿತೆಯ ನಡುವೆ ನಡೆದ ಸಂಭಾಷಣೆ ಕುರಿತು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಇನ್ನಷ್ಟು ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.
ಇದನ್ನು ನೋಡಿ : ಕಾವ್ಯಾಗೆ ಫೇವರಿಸಂ ಮಾಡಿದ ಗಿಲ್ಲಿ? ಶುರುವಾಗಿದೆ ಚರ್ಚೆ




