Metro ದಲ್ಲಿ ಮೊಬೈಲ್ ಸೌಂಡ್ ಜಾಸ್ತಿ ಇಡೋದು, ತಿಂಡಿ ತಿನ್ನೋದು ಮಾಡಿದ್ರೆ ಬೀಳುತ್ತೆ ದಂಡ .

ನಿತ್ಯ ನಗರದ ಟ್ರಾಫಿಕ್ ಮಧ್ಯೆ ವೇಗವಾಗಿ ಸಂಚಾರಕ್ಕೆ ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಮೊದಲ ಆಯ್ಕೆಯಾಗಿ ಪರಿಣಮಿಸಿದೆ. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೆಟ್ರೋ ನಿಯಮ ಉಲ್ಲಂಘನೆಗಳೂ ಹೆಚ್ಚುತ್ತಿವೆ. ವಿಶೇಷವಾಗಿ ಮೊಬೈಲ್ ಬಳಕೆಯಿಂದ ಉಂಟಾಗುವ ತೊಂದರೆಗಳು ಸಹ ಪ್ರಯಾಣಿಕರಿಗೆ ಕಿರಿಕಿರಿ ತಂದಿದ್ದು, ಇದಕ್ಕೆ ಕಡಿವಾಣ ಹಾಕಲು BMRCL ಕಠಿಣ ಕ್ರಮಕ್ಕೆ ಮುಂದಾಗಿದೆ.
ಸಾವಿರಾರು ದೂರು ದಾಖಲು
ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಕೆಲವರು Reels Scroll ಮಾಡುವುದು, ಯೂಟ್ಯೂಬ್ ವೀಕ್ಷಣೆ, Bluetooth ಮೂಲಕ ಏರುಧ್ವನಿಯಲ್ಲಿ ಮಾತನಾಡುವುದು ಸಾಮಾನ್ಯವಾಗಿದೆ. ಮೆಟ್ರೋದಲ್ಲಿ ಲೌಡ್ ಸೌಂಡ್ ಬಳಸಬಾರದು ಎಂಬ ನಿಯಮ ಇದ್ದರೂ ಉಲ್ಲಂಘನೆಗಳು ನಿರಂತರವಾಗುತ್ತಿವೆ. ಇದರಿಂದ ಒಂದೇ ತಿಂಗಳಲ್ಲಿ ಬಿಎಂಆರ್ಸಿಎಲ್ಗೆ ಸಾವಿರಾರು ದೂರುಗಳು ದಾಖಲಾಗಿವೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 28 ಡಿಸೆಂಬರ್ 2025

268 ಕೇಸ್
ಡಿಸೆಂಬರ್ 5ರಿಂದ 25ರವರೆಗೆ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಲೌಡ್ ಸೌಂಡ್ ಬಳಕೆಗೆ ಸಂಬಂಧಿಸಿದಂತೆ 6,520 ಪ್ರಕರಣಗಳು ದಾಖಲಾಗಿವೆ. ಅಲ್ಲದೆ Metro ದಲ್ಲಿ ತಿಂಡಿ ಸೇವನೆಗೆ 268 ಕೇಸ್ಗಳು, ತಂಬಾಕು ಸೇವನೆಗೆ 641 ದೂರುಗಳು ದಾಖಲಾಗಿವೆ.
ಹಲವು ಬಾರಿ ಎಚ್ಚರಿಕೆ
ಕಳೆದ ಒಂದು ವರ್ಷದಿಂದ ಬಿಎಂಆರ್ಸಿಎಲ್ ಸರ್ಪ್ರೈಸ್ ತಪಾಸಣೆ ನಡೆಸುತ್ತಿದ್ದು, ನಿಯಮ ಉಲ್ಲಂಘಕರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೆ ಎಚ್ಚರಿಕೆಯಾದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೀಗ ದಂಡಾಸ್ತ್ರ ಪ್ರಯೋಗಕ್ಕೆ ಮೆಟ್ರೋ ಆಡಳಿತ ಮಂಡಳಿ ಸಜ್ಜಾಗಿದೆ.

ಬೀಳುತ್ತೆ ದಂಡ
ಮೊಬೈಲ್ನಲ್ಲಿ ಜಾಸ್ತಿ Volume ಇಡುವುದು, ಬ್ಲೂಟೂತ್ ಬಳಸಿ ಗಟ್ಟಿಯಾಗಿ ಮಾತನಾಡುವುದು, ಮೆಟ್ರೋದಲ್ಲಿ ಊಟ–ತಿಂಡಿ ಮಾಡುವುದು ಹಾಗೂ ತಂಬಾಕು ಸೇವನೆ ಮಾಡುವವರಿಗೆ ಶೀಘ್ರದಲ್ಲೇ Fine ವಿಧಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು BMRCL ತಿಳಿಸಿದೆ.
ಇದನ್ನು ನೋಡಿ : NEW YEAR CELEBRATION PLAN ಮಾಡ್ತಿದ್ರಾ? ಇಲ್ಲಿದೆ ಒಂದು ಬಂಪರ್ ಸುದ್ದಿ | ROYAL HEVAN TUMAKURU




