Dina Bhavishya : 2025 ಡಿಸೆಂಬರ್ 27ರ ಶನಿವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishya :
ಮೇಷ ರಾಶಿ
ಇಂದು ಅತ್ಯಂತ ಶುಭ ದಿನ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಿ ವೃತ್ತಿ ಜೀವನದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬರುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದ್ದು, ಕುಟುಂಬದಲ್ಲಿ ಸಂತೋಷ ಇರುತ್ತದೆ.
ಹಣಕಾಸು, ಶಿಕ್ಷಣ ಹಾಗೂ ಪ್ರೀತಿಯ ಜೀವನದಲ್ಲಿ ಉತ್ತಮ ಫಲಿತಾಂಶಗಳು ಕಾಣಿಸಿಕೊಳ್ಳುತ್ತವೆ. ಕೆಲಸದ ಅಡೆತಡೆಗಳು ದೂರವಾಗಿ ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ; ಭೂಮಿ ಅಥವಾ ವಾಹನ ಖರೀದಿ ಸಾಧ್ಯತೆ ಇದೆ. ಆರೋಗ್ಯ ಸುಧಾರಿಸಿ ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸು ಸಂತೋಷವಾಗಿರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಹೊಸ ಹೂಡಿಕೆ ಅವಕಾಶಗಳು ಸಿಗುತ್ತವೆ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಳೆಯ ಆಸ್ತಿಯಿಂದ ಆರ್ಥಿಕ ಲಾಭ ಸಾಧ್ಯ.
ಕಚೇರಿಯಲ್ಲಿ ಸ್ಪರ್ಧೆಯಿದ್ದರೂ ಹಿರಿಯರ ಬೆಂಬಲದಿಂದ ಅಡೆತಡೆಗಳು ದೂರವಾಗುತ್ತವೆ. ಕುಟುಂಬ ಪ್ರವಾಸದಿಂದ ಸಂತೋಷದ ಕ್ಷಣಗಳು ಲಭಿಸಿ, ಪ್ರೀತಿಯ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ಹೆಚ್ಚಾಗುತ್ತದೆ.
ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಹಣಕಾಸಿನಲ್ಲಿ ಏರುಪೇರು ಹಾಗೂ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಬಹುದು. ವೈವಾಹಿಕ ಜೀವನದಲ್ಲಿ ಎಚ್ಚರ ಅಗತ್ಯವಿದ್ದು, ಪ್ರೇಮ ಜೀವನದಲ್ಲಿ ಹೊಸ ರೋಚಕ ತಿರುವುಗಳು ಕಾಣಿಸುತ್ತವೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ಮೆಂಟ್, ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂದರ್ಶನ ಅವಕಾಶಗಳು ಸಿಗಬಹುದು.
ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುತ್ತದೆ. ಉದ್ಯೋಗ–ವ್ಯಾಪಾರಕ್ಕೆ ಅನುಕೂಲಕರ ದಿನವಾಗಿದ್ದು, ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಿ.
ಕಟಕ ರಾಶಿ
ಕರ್ಕಾಟಕ ರಾಶಿಯವರು ಇಂದು ದಿನಚರಿಯಿಂದ ಸ್ವಲ್ಪ ವಿರಾಮ ಪಡೆದು ಹೊಸ ಅನುಭವಗಳನ್ನು ಅನ್ವೇಷಿಸಬೇಕು. ಖರ್ಚುಗಳಲ್ಲಿ ನಿಯಂತ್ರಣ ಅಗತ್ಯವಿದ್ದು, ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು.
ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಾಧ್ಯತೆ , ಕೆಲವರಿಗೆ ವಿದೇಶ ಉದ್ಯೋಗ ಅವಕಾಶ ಸಿಗಬಹುದು. ಸಂಪತ್ತು, ವಿದ್ಯಾಭ್ಯಾಸ, ವ್ಯಾಪಾರ ಮತ್ತು ಕುಟುಂಬ ಜೀವನದಲ್ಲಿ ಉತ್ತಮತೆ ಕಾಣಿಸಿ, ಪ್ರೀತಿ ಹಾಗೂ ಭಾವನಾತ್ಮಕ ಬಂಧ ಬಲವಾಗಿರುತ್ತದೆ.
ಶತ್ರುಗಳ ಮೇಲೆ ಜಯ ಸಾಧಿಸಿದರೂ ಆರೋಗ್ಯದ ಕಡೆ ಗಮನ ಅಗತ್ಯ.
ಸಿಂಹ ರಾಶಿ
ಇಂದು ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿ ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಾಗುತ್ತದೆ. ಉದ್ಯಮಿಗಳಿಗೆ ಹೊಸ ಒಪ್ಪಂದದಿಂದ ಲಾಭ ಸಿಗುವ ಸಾಧ್ಯತೆ ಇದ್ದರೂ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಆಸ್ತಿ ಅಥವಾ ವಾಹನ ಖರೀದಿ ಯೋಜನೆ ಸಾಧ್ಯವಾಗಿದ್ದು, ಶಿಕ್ಷಣ ಮತ್ತು ಕೆಲಸಗಳಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಪ್ರೀತಿಯ ಜೀವನ ಸಂತೋಷಕರವಾಗಿದ್ದು ಸಂಬಂಧಗಳು ಗಟ್ಟಿಯಾಗುತ್ತವೆ; ಆದರೆ ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸುವುದು ಒಳಿತು. ಒಂಟಿ ಜನರಿಗೆ ವಿಶೇಷ ವ್ಯಕ್ತಿಗಳ ಭೇಟಿ ಸಾಧ್ಯ.
ಕನ್ಯಾ ರಾಶಿ
ಇಂದು ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ; ಹಣವನ್ನು ಜಾಣ್ಮೆಯಿಂದ ನಿರ್ವಹಿಸುವುದು ಒಳಿತು. ವೃತ್ತಿ ಗುರಿಗಳತ್ತ ಪ್ರೇರಣೆ ಹೆಚ್ಚಾಗಿದ್ದು, ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸ ಯೋಜನೆ ಸಾಧ್ಯ.
ಹಳೆ ಆಸ್ತಿ ಮಾರಾಟದಿಂದ ಲಾಭ, ವಿದ್ಯಾಭ್ಯಾಸದಲ್ಲಿ ಯಶಸ್ಸು ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಒಂಟಿ ಜನರ ಪ್ರಣಯ ಜೀವನದಲ್ಲಿ ಹೊಸ ತಿರುವುಗಳು ಕಾಣಿಸಿ, ಹೊಸ ಜನರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಕುಟುಂಬದೊಂದಿಗೆ ಅನಗತ್ಯ ವಾದ ತಪ್ಪಿಸಿ ಗುಣಮಟ್ಟದ ಸಮಯ ಕಳೆಯಿರಿ; ಆರೋಗ್ಯ ಸಾಮಾನ್ಯವಾಗಿರುತ್ತದೆ
ತುಲಾ ರಾಶಿ
ಇಂದು ನಿಮ್ಮ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದು, ಬಾಕಿ ಇದ್ದ ಕಾರ್ಯಗಳು ಪ್ರಾರಂಭವಾಗುತ್ತವೆ. ಖರ್ಚು ನಿಯಂತ್ರಣದಲ್ಲಿ ಯಶಸ್ಸು ಸಿಗಿ, ಹಲವು ಆದಾಯ ಮೂಲಗಳಿಂದ ಆರ್ಥಿಕ ಲಾಭವಾಗುತ್ತದೆ.
ವೃತ್ತಿಜೀವನದಲ್ಲಿ ನೆಟ್ವರ್ಕಿಂಗ್ ಹೆಚ್ಚಾಗಿ ಹೊಸ ಪರಿಚಯಗಳು ದೊರೆಯುತ್ತವೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಂಗಾತಿಯಿಂದ ಬೆಂಬಲ ಲಭಿಸಿ, ಗುರಿ ಸಾಧನೆಗೆ ಪ್ರೇರಣೆ ಹೆಚ್ಚಾಗುತ್ತದೆ.
ಆಸ್ತಿ ಖರೀದಿ ಯೋಜನೆ, ವಿದ್ಯಾಭ್ಯಾಸದಲ್ಲಿ ಧನಾತ್ಮಕ ಫಲಿತಾಂಶ, ವ್ಯಾಪಾರ ವಿಸ್ತರಣೆ ಹಾಗೂ ಭೌತಿಕ ಸೌಕರ್ಯಗಳ ವೃದ್ಧಿ ಸಾಧ್ಯ; ಒಂಟಿ ಜನರಿಗೆ ಜೀವನ ಸಂಗಾತಿ ಸಿಗುವ ಸೂಚನೆ ಇದೆ.
ವೃಶ್ಚಿಕ ರಾಶಿ
ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿದ್ದು ಹಣದ ಒಳಹರಿವು ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ–ಶಾಂತಿ ನೆಲೆಸಿ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ವಿದ್ಯಾರ್ಥಿಗಳಿಗೆ ಶ್ರಮದ ಫಲ ದೊರೆತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ.
ಕುಟುಂಬದಲ್ಲಿ ಶುಭ ಸುದ್ದಿ ಕೇಳಿಬಂದು, ಆಸ್ತಿ ವಿವಾದಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ.
ಸಂಗಾತಿಯೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ; ಒಂಟಿ ಜನರಿಗೆ ಪ್ರಸ್ತಾಪಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಬಹುದು. ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದು ಒಳಿತು.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ ದೊರಿ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆರ್ಥಿಕ ಸ್ಥಿರತೆ ಇರಲಿದ್ದು, ವೃತ್ತಿಜೀವನದಲ್ಲಿ ಹೊಸ ಸಾಧನೆಗಳು ಹಾಗೂ ಉದ್ಯೋಗಿಗಳಿಗೆ ಬಡ್ತಿ ಅವಕಾಶಗಳು ಕಾಣಿಸಿಕೊಳ್ಳುತ್ತವೆ.
ಸಹೋದರರು ಅಥವಾ ಆಪ್ತ ಸ್ನೇಹಿತರಿಗೆ ಆರ್ಥಿಕ ಸಹಾಯ ಮಾಡುವ ಸಾಧ್ಯತೆ ಇದ್ದು, ಸ್ನೇಹಿತರೊಂದಿಗೆ ಪ್ರವಾಸ ಯೋಜನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆಸ್ತಿ ಖರೀದಿ ಯೋಚನೆ ಮೂಡಬಹುದು;
ಪ್ರಣಯ ಜೀವನದಲ್ಲಿ ಮಧುರತೆ ನೆಲೆಸಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ.
ಮಕರ ರಾಶಿ
ಇಂದು ಆರ್ಥಿಕ ವಿಷಯಗಳಲ್ಲಿ ಬದಲಾವಣೆಗಳು ಸಂಭವಿಸಿ ಹಲವು ಆದಾಯ ಮೂಲಗಳಿಂದ ಲಾಭವಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ನೆಲೆಸಿ, ಆಸ್ತಿ ಖರೀದಿ ಹಾಗೂ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶಗಳು ಸಾಧ್ಯ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ;
ಒಂಟಿ ಜನರಿಗೆ ವಿಶೇಷ ವ್ಯಕ್ತಿಯ ಭೇಟಿಯಿಂದ ಹೊಂದಾಣಿಕೆ ಮೂಡುತ್ತದೆ. ಖರ್ಚುಗಳನ್ನು ನಿಯಂತ್ರಿಸಿ, ಹೂಡಿಕೆ ನಿರ್ಧಾರಗಳನ್ನು ಜಾಣ್ಮೆಯಿಂದ ತೆಗೆದುಕೊಳ್ಳಿ. ಆರೋಗ್ಯ ಸಾಮಾನ್ಯವಾಗಿದ್ದು, ಯೋಗ ಮತ್ತು ವ್ಯಾಯಾಮದಿಂದ ಮಾನಸಿಕ–ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದ್ದು, ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಬೆಂಬಲಿಸುತ್ತದೆ. ಕಚೇರಿಯಲ್ಲಿ ಹೊಸ ಯೋಜನೆಗಳ ಅವಕಾಶ ಸಿಗಿ, ಮನೆಗೆ ಅತಿಥಿಗಳ ಆಗಮನದಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಪೂರ್ವಿಕರ ಆಸ್ತಿಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ, ಕುಟುಂಬ ಪ್ರವಾಸ ಯೋಜನೆ ಸಾಧ್ಯ. ಸಂಬಂಧಗಳಲ್ಲಿ ಆಪ್ತತೆ ಹೆಚ್ಚಾಗಿ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧ ಬಲವಾಗುತ್ತದೆ.
ವ್ಯಾಪಾರದಲ್ಲಿ ಹಾಗೂ ಹಲವು ಆದಾಯ ಮೂಲಗಳಿಂದ ಲಾಭ ಪಡೆದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಕಾಣಿಸುತ್ತದೆ.
ಮೀನ ರಾಶಿ
ಇಂದು ಹೊಸ ಹಣಕಾಸು ಯೋಜನೆಗಳಿಗೆ ಅನುಕೂಲಕರ ದಿನವಾಗಿದ್ದು, ವೃತ್ತಿ ಸಂಬಂಧಿತ ನಿರ್ಧಾರಗಳು ಲಾಭಕಾರಿಯಾಗುತ್ತವೆ. ಕುಟುಂಬ ಜೀವನದಲ್ಲಿ ಸಂತೋಷ–ಶಾಂತಿ ನೆಲೆಸಿ, ಕೆಲಸದ ನಿಮಿತ್ತ ದೀರ್ಘ ಪ್ರಯಾಣ ಸಾಧ್ಯ.
ಆಸ್ತಿ ಮತ್ತು ಕಾನೂನು ವಿವಾದಗಳಿಗೆ ಪರಿಹಾರ ಸಿಗಿ, ಮಕ್ಕಳಿಂದ ಶುಭ ಸುದ್ದಿ ದೊರೆಯಬಹುದು. ಸಂಬಂಧಗಳಲ್ಲಿ ಭಾವನಾತ್ಮಕ ಏರಿಳಿತಗಳು ಇರಬಹುದಾದ್ದರಿಂದ ಸ್ವಯಂ ನಿಯಂತ್ರಣ ವಹಿಸಿ, ಹಣಕಾಸು ನಿರ್ಧಾರಗಳನ್ನು ಜಾಣ್ಮೆಯಿಂದ ತೆಗೆದುಕೊಳ್ಳಿ.




