
NEWDELHI : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್ಟಿ ಮಂಡಳಿ ಘೋಷಿಸಿದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (GST 2.0) ನಾಳೆಯಿಂದಲೇ ಜಾರಿಯಾಗಲಿದೆ. ಈ ಪರಿಷ್ಕರಣೆಗಳ ಹಿನ್ನೆಲೆಯಲ್ಲಿ, ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾದರೆ, ಇನ್ನು ಕೆಲವು ವಸ್ತುಗಳು ಅಗ್ಗವಾಗುವ ನಿರೀಕ್ಷೆಯಿದೆ.
ಹೊಸ ಜಿಎಸ್ಟಿ ಯೋಜನೆಯಡಿಯಲ್ಲಿ ಮೂರು ಪ್ರಮುಖ ತೆರಿಗೆ ಸ್ಲ್ಯಾಬ್ಗಳನ್ನು ರೂಪಿಸಲಾಗಿದೆ – ಶೇ. 5%, 18%, ಮತ್ತು 40%. ಅಗತ್ಯಸರಕು – 5%, ಸಾಮಾನ್ಯ ಸೇವೆಗಳು – 18%, ಐಷಾರಾಮಿ ಸರಕು – 40%ಈ ಯೋಜನೆಯಡಿಯಲ್ಲಿ,ಅಗತ್ಯ ಸರಕುಗಳಿಗೆ 5% ತೆರಿಗೆನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಬಳಸುವ ಇತರ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ಶೇ. 18% ಆಗಿದೆ. ಆದರೆ,ಐಷಾರಾಮಿ ವಸ್ತುಗಳು, ಉದಾಹರಣೆಗೆ ತಂಬಾಕು, ಮದ್ಯ, ಬೆಟ್ಟಿಂಗ್, ಆನ್ಲೈನ್ ಗೇಮಿಂಗ್ಹೀಗೆ ಉತ್ತಮ ಆದಾಯ ಉಳ್ಳ ಕ್ಷೇತ್ರಗಳಿಗೆಶೇ. 40%ತನಕ ತೆರಿಗೆ ವಿಧಿಸಲಾಗಿದೆ. ಇದು ತೆರಿಗೆ ವ್ಯವಸ್ಥೆಯ ಶ್ರೇಣೀಕರಣವನ್ನು ಸರಳಗೊಳಿಸಿ, ಸುಧಾರಿತ ಪಾಲನೆಗೆ ಮಾರ್ಗಹೊಂದಿಸಲಿದೆ.
ಈ ಹೊಸ ವ್ಯವಸ್ಥೆಯು ಈಗಿರುವಶೇ. 12 ಹಾಗೂ 28ರಷ್ಟು ತೆರಿಗೆ ಇರುವ ಅನೇಕ ವಸ್ತುಗಳ ತೆರಿಗೆಯನ್ನು ಕಡಿಮೆಮಾಡುವ ಮೂಲಕ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಇದರಿಂದಾಗಿಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನಸಿಕ್ಕುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರವು ಈ ಮೂಲಕ ತೆರಿಗೆ ಸಂಗ್ರಹವನ್ನು ಸುಧಾರಿಸಲು, ಬಳಕೆದಾರರಿಗೆ ಲಾಭವಾಗುವ ರೀತಿ ಜಿಎಸ್ಟಿ ವ್ಯವಸ್ಥೆ ಪರಿಷ್ಕರಣೆ ಮಾಡುತ್ತಿದೆ.




