‘ರೀಲ್ಸ್ ಆಂಟಿ’ ಜೊತೆ ಲಿವಿಂಗ್ ರಿಲೇಶನ್ ಶಿಪ್ – ಯುವಕ Suicide! ಮಹಿಳೆ ಎಸ್ಪೇಪ್

ಸೋಶಿಯಲ್ ಮಿಡಿಯಾ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿ ಇದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರೀಗಂಧನಗರದಲ್ಲಿ ನಡೆದಿದೆ. ಮೃತನ ಕುಟುಂಬ ಮಹಿಳೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ಯುವಕ. ಮನೆಯ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ರೀಲ್ಸ್ ರಾಣಿ ಜೊತೆ ಲಿವಿಂಗ್ ರಿಲೇಶನ್ ಶಿಪ್
ತಿಪ್ಪೇಸ್ವಾಮಿ ಮತ್ತು ದಾವಣಗೆರೆ ಮೂಲದ ಪ್ರಿಯಾಂಕಾ ಎಂಬ ಮಹಿಳೆಗೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಬಳಿಕ ಇಬ್ಬರೂ ಒಂದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ತಿಂಗಳಿಂದ ಶ್ರೀಗಂಧನಗರದಲ್ಲಿ ಲಿವಿಂಗ್ ರಿಲೇಶನ್ಶಿಪ್ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ತಿಂಗಳಿಗೆ ₹3 ಸಾವಿರ ಬಾಡಿಗೆ ಇರುವ ಮನೆಯಲ್ಲಿ ವಾಸವಾಗಿದ್ದ ಈ ಜೋಡಿ, ಮನೆ ಮಾಲೀಕರಿಗೆ ತಾವು ಗಂಡ-ಹೆಂಡತಿ ಎಂದು ಪರಿಚಯಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
READ THIS : ಗೊಬ್ಬರ ತುಂಬಿದ ಲಾರಿಗೆ ಕಾರು ಡಿಕ್ಕಿ – ನಾಲ್ವರು ಸಾವು

ನನ್ನ ಮೇಂಟೇನ್ ಮಾಡಲು ನಿನ್ನಿಂದ ಆಗಲ್ಲ
ಇನ್ನು ಪ್ರಿಯಾಂಕಾ ಈಗಾಗಲೇ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜೊತೆ ವಾಸವಾಗಿದ್ದಳು ಎಂದು ಮೃತನ ಕುಟುಂಬ ಆರೋಪಿಸಿದೆ. ಅಲ್ಲದೆ, “ನನ್ನನ್ನು ಮೇಂಟೇನ್ ಮಾಡಲು ನಿನ್ನಿಂದ ಆಗಲ್ಲ, ನನ್ನನ್ನು ಬಿಟ್ಟು ಹೋಗು” ಎಂದು ಪ್ರಿಯಾಂಕಾ ನಿರಂತರವಾಗಿ ಕಿರುಕುಳ ನೀಡುತ್ತಿದ್ದಳು ಎಂದು ಮೃತನ ಕುಟುಂಬ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಮನನೊಂದ ತಿಪ್ಪೇಸ್ವಾಮಿ Suicide ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಯುವಕನ ಸಾವಿಗೆ ಆಂಟಿ ಕಾರಣಾನಾ?
ಇಬ್ಬರೂ ಒಟ್ಟಿಗೆ ಸಂಚರಿಸುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಮೃತನ ಪೋಷಕರು ಪೊಲೀಸರಿಗೆ ನೀಡಿದ್ದಾರೆ. ತಿಪ್ಪೇಸ್ವಾಮಿ ಸಾವಿಗೆ ಪ್ರಿಯಾಂಕಾಳೇ ಕಾರಣ ಎಂದು ಆರೋಪಿಸಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಪ್ರಿಯಾಂಕಾ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

MUST WATCH : BITCOIN ಹಗರಣದ KING PIN LOCK ಶ್ರೀಕಿ ಅರೆಸ್ಟ್ ಬೆನ್ನಲ್ಲೇ ನಲಪಾಡ್ಗೂ ಸಂಕಷ್ಟ




